ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ದೇಶ ಮತ್ತು ವಿಶ್ವಕ್ಕೆ ಮಾದರಿ: ಸಿಎಂ ಆದಿತ್ಯನಾಥ್

Prasthutha|

ಲಕ್ನೋ: ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕೊಂಡಾಡಿದ ಮುಖ್ಯಮಂತ್ರಿ ಆದಿತ್ಯನಾಥ್, ಇದು ದೇಶ ಮತ್ತು ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದ್ದಾರೆ.

- Advertisement -

ಪೊಲೀಸ್ ಆಧುನೀಕರಣ ಯೋಜನೆಯಡಿ 56 ಜಿಲ್ಲೆಗಳಿಗೆ ಆಧುನಿಕ ಜೈಲು ವ್ಯಾನ್ ಗಳಿಗೆ ಭಾನುವಾರ ಮಧ್ಯಾಹ್ನ ತಮ್ಮ ನಿವಾಸದಿಂದ ಹಸಿರು ನಿಶಾನೆ ತೋರಿದ ನಂತರ ನಡೆದ ಸಮಾರಂಭದಲ್ಲಿ ಮಾತಾಡಿದ ಅವರು, ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ದೇಶ ಮತ್ತು ಜಗತ್ತು ಮಾದರಿಯಾಗಿ ನೋಡುತ್ತಿದೆ ಎಂದು ಹೇಳಿದರು.

ಗಲಭೆಗಳು, ಅರಾಜಕತೆ ಮತ್ತು ಗೂಂಡಾಗಿರಿಗಳು 2017 ಕ್ಕಿಂತ ಮೊದಲು ತಮ್ಮ ಉತ್ತುಂಗದಲ್ಲಿತ್ತು. ಆದರೀಗ ವಿವಿಧ  ರಾಜ್ಯದ ಜನರು, ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಚರ್ಚಿಸುತ್ತಾರೆ ಎಂದು ಹೇಳಿದರು. ಹಿಂದಿನ ಸರ್ಕಾರಗಳನ್ನು ಲೇವಡಿ ಮಾಡಿದ ಆದಿತ್ಯನಾಥ್, ಈ ಹಿಂದೆ ಪೊಲೀಸರು ಓಡುತ್ತಿದ್ದರು ಮತ್ತು ಅಪರಾಧಿಗಳು ಪಲಾಯನ ಮಾಡುತ್ತಿದ್ದರು ಎಂದು ವ್ಯಂಗ್ಯ ಮಾಡಿದರು.

- Advertisement -

NCRB ವರದಿ ಪ್ರಕಾರ ಅಪರಾಧಗಳಲ್ಲಿ ಉತ್ತರಪ್ರದೇಶವೇ ನಂಬರ್ ಒನ್

ಆದರೆ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಅತಿಹೆಚ್ಚು ಅಪರಾಧಗಳು ನಡೆಯುವ ಸ್ಥಳ ಉತ್ತರಪ್ರದೇಶ ಎಂದು ವರದಿಯಾಗಿದೆ. ರಾಜ್ಯಗಳ ಪೈಕಿ ಅತಿ ಹೆಚ್ಚು ಕೊಲೆ ಪ್ರಕರಣ (3,717), ಹೆಣ್ಮಕ್ಕಳ ಮೇಲಿನ ದೌರ್ಜನ್ಯ , ಸೈಬರ್ ಕ್ರೈಂ ನಡೆಯುವ ರಾಜ್ಯ ಉತ್ತರ ಪ್ರದೇಶ ಎಂದು NCRB ತಿಳಿಸುತ್ತದೆ.

Join Whatsapp