ವಿಪರೀತ ಕುಡಿದು ಸ್ನೇಹಿತರ ಸವಾಲಿಗಾಗಿ ನೀರಿಗೆ ಹಾರಿದ ವ್ಯಕ್ತಿ: ನೋಡ ನೋಡುತ್ತಿದ್ದಂತೆಯೇ ಮುಳುಗಿ ಸಾವು

Prasthutha|

ಕಲಬುರಗಿ: ಇಲ್ಲಿನ ಕಮಲಾಪುರ ತಹಸಿಲ್‌ನಲ್ಲಿ ವಿಹಾರಕ್ಕೆಂದು ಬಂದಿದ್ದ ಹೈದರಾಬಾದ್‌ನ ಸ್ನೇಹಿತರ ತಂಡದ ವ್ಯಕ್ತಿಯೊಬ್ಬ ವಿಪರೀತ ಕುಡಿದು ಸವಾಲಿಗಾಗಿ ನೀರಿಗೆ ಹಾರಿದ್ದು, ನೋಡ ನೋಡುತ್ತಿದ್ದಂತೆಯೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ವ್ಯಕ್ತಿ ಮೊದಲೇ ನಿಲ್ಲಲಾಗದೆ, ಸರಿಯಾಗಿ ನಡೆಯಲಾಗದೆ ಇರುವುದು ದೃಶ್ಯದಲ್ಲಿ ಸೆರೆಯಾಗಿದೆ‌‌. ಅಂತಹ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಸವಾಲು ಹಾಕಿ ನೀರಿಗೆ ಜಿಗಿಸಿದ ಸ್ನೇಹಿತರ ಮೇಲೆ ಅನುಮಾನ ಸೃಷ್ಟಿಯಾಗಿದೆ.

- Advertisement -

ಹೈದರಾಬಾದ್‌ನ ಜಹಂಗೀರಾಬಾದ್ ಸಮೀಪದ ಬಂದಲಗೂಡಾ ನಿವಾಸಿ ಮೊಹಮ್ಮದ್ ಸಾಜೀದ್ ದಸ್ತಗೀರ್ (25) ಮೃತ ಯುವಕ.

ಮೇ 19ರಂದು ಸಾಜೀದ್ ತನ್ನ ಸ್ನೇಹಿತರಾದ ಸೈಯದ್ ವಾಜೀದ್, ಮೊಹಮ್ಮದ್ ಅಫ್ರೋಜ್, ತಾಜ್ಜುದೀನ್ ಹಾಗೂ ಸೈಯದ್ ಸಮೀರ್ ಜೊತೆ ಸೇರಿ ಆಟೊದಲ್ಲಿ ಚಿಟಗುಪ್ಪ-ಸೊಂತ ಮಾರ್ಗವಾಗಿ ಕಮಲಾಪುರ ತಾಲ್ಲೂಕಿನ ಚೇಂಗಟಾ ಮಸ್ತಾನ ಖಾದ್ರಿ ದರ್ಗಾಕ್ಕೆ ಬಂದಿದ್ದರು. ಮಾರ್ಗಮಧ್ಯದ ಪಟವಾದ ಬ್ರಿಜ್ ಕಂ ಬ್ಯಾರೇಜ್‌ನಲ್ಲಿ ಸ್ನಾನ ಮಾಡಲು ಅಫ್ರೋಜ್ ಹಾಗೂ ತಾಜ್ಜುದೀನ್ ನೀರಲ್ಲಿ ಇಳಿದ್ದಾರೆ. ಆ ಬಳಿಕ ಕುಡಿದು ತೂರಾಡುತ್ತಿದ್ದ ಸಾಜೀದ್ ಸಹ ನೀರಿಗೆ ಹಾರಿದ್ದು, ಕುಡಿದ ಮತ್ತಿನಲ್ಲಿ ಈಜಲು ಆಗದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಮಲಾಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಹೊರ ತೆಗೆದಿದ್ದಾರೆ.

- Advertisement -

ಕಂಠಪೂರ್ತಿ ಕುಡಿದಿದ್ದ ಜಾವೇದ್ ಸ್ನೇಹಿತರು ಹಾಕಿದ ಸವಾಲನ್ನು ಒಪ್ಪಿ ಕೆರೆಗೆ ಜಿಗಿದಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಮುಳಗಿ ಸಾವನ್ನಪ್ಪಿದ್ದಾರೆ. ಘಟನೆಯ ದೃಶ್ಯ ಆತನ ಸ್ನೇಹಿತರ ಮೊಬೈಲ್​ನಲ್ಲಿ ಸೆರೆಯಾಗಿದೆ. ಈಜು ಬಾರದಿದ್ದರೂ ನದಿಗೆ ಜಿಗಿದ ಗೆಳೆಯನನ್ನು ಆತ ಮುಳುಗಿ ತಡವಾದ ಬಳಿಕವಷ್ಟೇ ಹುಡುಕಲು ತೊಡಗಿದ್ದಾರೆ.

ಗೆಳೆಯನನ್ನು ಸಾವಿನಿಂದ ರಕ್ಷಣೆ ಮಾಡದೇ ಘಟನೆಯನ್ನು ರೆಕಾರ್ಡ್​ ಮಾಡಿದ್ದು ಕೂಡ ಭಾರೀ ಅನುಮಾನಕ್ಕೆ ಕಾರಣವಾಗಿದೆ.

https://x.com/TeluguScribe/status/1793512268879306938?ref_src=twsrc%5Etfw%7Ctwcamp%5Etweetembed%7Ctwterm%5E1793512268879306938%7Ctwgr%5E0b2dd4e0d8261b8578c29e0b0afaa3b3a5375897%7Ctwcon%5Es1_&ref_url=https%3A%2F%2Fwww.freepressjournal.in%2Findia%2Fkarnataka-shocker-drunk-man-bets-with-friends-jumps-into-lake-dies-due-to-drowning-as-onlookers-record-video

ಮೃತ ಸಾಜೀದ್ ಸಹೋದರ ಮೊಹಮ್ಮದದ ರಶೀದ್ ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ. ನನ್ನ ತಮ್ಮನಿಗೆ ಈಜು ಬರುತ್ತದೆ. ಆದರೂ ನೀರಿನಲ್ಲಿ ಮುಳುಗಿ ಮೃತಪಟ್ಟ ಕುರಿತು ನನಗೆ ಬಲವಾದ ಸಂಶಯವಿದೆ. ಈ ಕುರಿತು ತನಿಖೆ ನಡೆಸುವಂತೆ ದೂರು ನೀಡಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp