ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಮನೆಗೆ ಸಿಎಂ ಭೇಟಿ: ಪರಿಹಾರ ಘೋಷಣೆ

Prasthutha|

ಮೈಸೂರು: ಮೈಸೂರು ಯರಗನಹಳ್ಳಿಯ ಮನೆಯೊಂದರಲ್ಲಿ‌ ಅಡುಗೆ ಅನಿಲ ಸೋರಿಕೆಯಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಮನೆಗೆ ಮುಖ್ಯಮಂತ್ರಿ ‌ಸಿದ್ದರಾಮಯ್ಯ ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್, ಶಾಸಕ ತನ್ವೀರ್ ಸೇಠ್ ಜತೆಗೆ ಭೇಟಿ ನೀಡಿದ್ದಾರೆ. ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿ, ಮಾಹಿತಿ ಪಡೆದಿದ್ದಾರೆ.

- Advertisement -

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೃತರಿಗೆ ತಲಾ 3 ಲಕ್ಷದಂತೆ 12 ಲಕ್ಷ ಪರಿಹಾರ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಿಲಿಂಡರ್ ಸೋರಿಕೆ ಆಗಿ ಒಂದೇ ಕುಟುಂಬದ ನಾಲ್ವರು ಪ್ರಾಣಕಕೊಂಡ ಆಘಾತಕಾರಿ ಘಟನೆ ಅರಮನೆ ನಗರಿ ಮೈಸೂರಿನ ಯರಗನಹಳ್ಳಿಯಲ್ಲಿ ನಡೆದಿತ್ತು. ಯರಗನಹಳ್ಳಿ ನಿವಾಸಿಗಳಾದ ಕುಮಾರಸ್ವಾಮಿ(45), ಮಂಜುಳಾ(39), ಆರತಿ(19), ಸ್ವಾತಿ(17) ಮೃತರು.

- Advertisement -

ಸಣ್ಣ ಮನೆಯಲ್ಲಿ ಈ ಕುಟುಂಬ ವಾಸ ಮಾಡುತ್ತಿತ್ತು. ಕುಮಾರ್ ಮತ್ತು ಪತ್ನಿ ಮಂಜುಳಾ ರೂಮ್ ನಲ್ಲಿ ಮಲಗಿದ್ದರೆ, ಇಬ್ಬರು ಹೆಣ್ಣು ಮಕ್ಕಳು ಹಾಲ್‌ನಲ್ಲಿ ಮಲಗಿದ್ದರು. ಅನಿಲ ಸೋರಿಕೆಯಿಂದ ಒಬ್ಬ ಮಗಳಿಗೆ ಎಚ್ಚರವಾಗಿ ಬಾಗಿಲ ಬಳಿಗೆ ಬಂದು ಬೀಗ ತೆಗೆಯಲು ಯತ್ನಿಸಿ ತೆಗೆಯಲು ಆಗದೆ ಬಾಗಿಲ ಬಳಿಯೇ ಮೃತಪಟ್ಟಿದ್ದಾರೆ.

Join Whatsapp