ಈ ಬಾರಿಯ ಚುನಾವಣೆಯು ಸಂವಿಧಾನವನ್ನು ರಕ್ಷಿಸುವ ಹೋರಾಟ: ರಾಹುಲ್ ಗಾಂಧಿ

Prasthutha|

ನವದೆಹಲಿ: ಬಿಜೆಪಿ ಯಾವಾಗಲೂ ಸಂವಿಧಾನವನ್ನು ಕಿತ್ತೊಗೆಯಲು ಬಯಸುತ್ತದೆ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯು ಅದನ್ನು ರಕ್ಷಿಸುವ ಹೋರಾಟವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈಶಾನ್ಯ ದೆಹಲಿಯ ದಿಲ್ಶದ್ ಗಾರ್ಡ್ನಲ್ಲಿ ಪಕ್ಷದ ಅಭ್ಯರ್ಥಿ ಕನ್ಹಯ್ಯ ಕುಮಾರ್ ಪರ ಪ್ರಚಾರ ನಡೆಸಿ ರಾಹುಲ್ ಗಾಂಧಿ ಗುರುವಾರ ಮಾತನಾಡಿದರು.

- Advertisement -


‘ಬಿಜೆಪಿಯವರು ಭಾರತದ ಸಂವಿಧಾನವನ್ನಾಗಲೀ ಅಥವಾ ಭಾರತದ ಧ್ವಜವನ್ನಾಗಲೀ ಎಂದಿಗೂ ಸ್ವೀಕರಿಸಲಿಲ್ಲ. ಭಾರತದ ಸಂವಿಧಾನವನ್ನು ರಕ್ಷಣೆ ಮಾಡುವುದು ಈ ಚುನಾವಣೆಯ ಹೋರಾಟ. ಸಂವಿಧಾನ ಎನ್ನುವುದು ಕೇವಲ ಒಂದು ಪುಸ್ತಕವಲ್ಲ. ಗಾಂಧಿ, ಅಂಬೇಡ್ಕರ್ ಮತ್ತು ನೆಹರೂಜಿಯವರ ಸಾವಿರಾರು ವರ್ಷಗಳ ಸೈದ್ಧಾಂತಿಕ ಪರಂಪರೆಯನ್ನು ಹೊಂದಿದೆ. ಆದರೆ ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸಲು ಬಯಸುತ್ತಾರೆ ಎಂಬುದನ್ನು ಈ ಚುನಾವಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ’ ಎಂದು ಆರೋಪಿಸಿದರು.

Join Whatsapp