ಅನ್ಯ ಧರ್ಮೀಯರ ಮಳಿಗೆಯಲ್ಲಿ ಕೆಲಸ ನಿರ್ವಹಿಸದಂತೆ ಮುಸ್ಲಿಮ್ ಯುವಕರನ್ನು ತಡೆಯುತ್ತಿರುವ ಬಲಪಂಥೀಯ ಹಿಂದುತ್ವ ಸಂಘಟನೆ !

Prasthutha|

ಮುಝಪ್ಪರ್ ನಗರ : ಬಲಪಂಥೀಯ ಉಗ್ರ ಸಂಘಟನೆಯಾದ ಕ್ರಾಂತಿ ಸೇನೆಯ ಕಾರ್ಯಕರ್ತರು ಮಂಗಳವಾರ ಸ್ಥಳೀಯ ಮಟ್ಟದ ವ್ಯವಹಾರ ನಡೆಸುತ್ತಿರುವ ಸ್ವ-ಧರ್ಮೀಯ ಮಳಿಗೆಯಲ್ಲಿ ಕೆಲಸ ನಿರ್ವಹಿಸದಂತೆ ಮುಸ್ಲಿಮ್ ಕಾರ್ಮಿಕರನ್ನು ತಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬಂದಿದೆ.

- Advertisement -

ಹಿಂದೂ ಮಹಿಳೆಯರು ಮುಸ್ಲಿಮ್ ಯುವಕರ ಕೈಯ್ಯಿಂದ ಮೆಹಂದಿ ಹಚ್ಚಿಸುವ ಕುರಿತು ಎಚ್ಚರಿಕೆ ವಹಿಸುವಂತೆ ಹಿಂದೂ ಧರ್ಮದ ಮಳಿಗೆಯ ಮಾಲಕರನ್ನು ಒತ್ತಾಯಪಡಿಸುತ್ತಿರುವುದು ಪತ್ರಕರ್ತರೋರ್ವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ವೀಡಿಯೋ ದೃಶ್ಯಾವಳಿಯ ಮೂಲಕ ಬಹಿರಂಗವಾಗಿದೆ. ಬಲಪಂಥೀಯರ ಗುಂಪು ಮುಝಪ್ಪರ್ ನಗರದ ಪ್ರಮುಖ ಮಾರುಕಟ್ಟೆಯಲ್ಲಿ ಮಳಿಗೆಯನ್ನು ಚೆಕ್ ಮಾಡುತ್ತಿರುವುದು ಕೂಡಾ ವೀಡಿಯೋದಲ್ಲಿ ಗೋಚರಿಸಿದೆ.

ಘಟನೆಯ ಕುರಿತಂತೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಕ್ರಾಂತಿಸೇನೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮನೋಜ್ ಸೈನಿ, ಮುಸ್ಲಿಮ್ ಯುವಕರು ಹಿಂದು ಯುವತಿಯರನ್ನು ಲವ್ ಜಿಹಾದ್ ಷಡ್ಯಂತ್ರಕ್ಕೆ ಬಳಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆಂದು ಹೇಳಿದ್ದಾನೆ. ಮಾತ್ರವಲ್ಲದೆ ಹಲವಾರು ಮಳಿಗೆಯನ್ನು ಪರಿಶೀಲನೆ ನಡೆಸಿದ ಬಲಪಂಥೀಯರು, ಮುಸ್ಲಿಮ್ ಯುವಕರು ಲವ್ ಜಿಹಾದ್ ನಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ವಹಿಸುವಂತೆ ಮಳಿಗೆ ಮಾಲಕರನ್ನು ಒತ್ತಾಯಿಸಿದ್ದಾರೆ. ಹಿಂದೂ ಮಹಿಳೆಯರನ್ನು ಮೆಹಂದಿ ಹಚ್ಚುವ ನೆಪದಲ್ಲಿ ಮುಸ್ಲಿಮ್ ಯುವಕರು ಲವ್ ಜಿಹಾದ್ ಬಲೆಗೆ ಬೀಳಿಸುತ್ತಿದ್ದಾರೆ ಎಂದು ಸೈನಿ ಆರೋಪಿಸಿದ್ದಾನೆ.

- Advertisement -

ಬಲಪಂಥೀಯರು ನಡೆಸುತ್ತಿರುವ ಈ ಅನ್ಯಾಯದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿರುವ ಹಿಂದೂ ವರ್ತಕರು ನಮಗೆ ಧರ್ಮದ ಆಧಾರದಲ್ಲಿ ವ್ಯವಹಾರ ನಡೆಸಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾರಾದರೂ ಲಿಖಿತ ದೂರು ನೀಡಲು ಮುಂದಾದರೆ ಪ್ರಕರಣ ದಾಖಲಿಸಲಾಗುವುದೆಂದು ಪೊಲೀಸ್ ವರಿಷ್ಠಾಧಿಕಾರಿಯಾದ ಅರ್ಪಿತ್ ವಿಜಯವರ್ಗಿ ಅವರು ತಿಳಿಸಿದ್ದಾರೆ.

https://twitter.com/i/status/1425355976043941898
Join Whatsapp