ಹಿದಾಯ ಫೌಂಡೇಶನ್ ಗೆ ರಾಜೀನಾಮೆ ನೀಡಿದ ಟೀಂ ಬಿ-ಹ್ಯೂಮನ್ ಸಂಸ್ಥಾಪಕ

Prasthutha|

ಮಂಗಳೂರು: ಮಂಗಳೂರಿನ ಖ್ಯಾತ ಸಮಾಜ ಸೇವಾ ಸಂಸ್ಥೆಯಾದ ಟೀಂ ಬಿ-ಹ್ಯೂಮನ್ ಇದರ ಸಂಸ್ಥಾಪಕರಾದ ಆಸಿಫ್ ಡೀಲ್ಸ್ ರವರು ಹಿದಾಯ ಫೌಂಡೇಶನ್ ನ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಕಳೆದ 13 ವರ್ಷಗಳಿಂದ ಸಕ್ರಿಯವಾಗಿ ಹಿದಾಯ ಫೌಂಡೇಶನ್ ಸದಸ್ಯರಾಗಿದ್ದು ಪ್ರಸ್ತುತ ವೈಸ್ ಚೇರ್ಮನ್ ಹಾಗೂ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

- Advertisement -

ಇಷ್ಟು ವರ್ಷಗಳಿಂದ ಯಾವುದೇ ಪೂರ್ವಾಗ್ರಹವಿಲ್ಲದೆ ಎರಡೂ ಸಂಸ್ಥೆಗಳಲ್ಲಿ ಸಮಾನವಾಗಿ ತನ್ನನ್ನು ತಾನು ತೊಡಗಿಸಿಕೊಂಡು ಸೇವೆಗೈಯುತ್ತಿದ್ದ ಆಸಿಫ್ ಡೀಲ್ಸ್. ಕೆಲವು ಅನಿವಾರ್ಯ ಕಾರಣಗಳಿಂದಾಗಿ ಹಿದಾಯ ಫೌಂಡೇಶನ್ ನ ಸದಸ್ಯತ್ವ ಸೇರಿ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಭವಿಷ್ಯದ ಯಾವುದೇ ಯೋಜನೆಗಳಲ್ಲಿ ಅವರು ಯಾವುದೇ ಸಂಭಂದ ಹೊಂದಿರುವುದಿಲ್ಲ ಎಂದು ತಿಳಿಸಿದ್ದಾರೆ.

ಕೆಲವರು ಹರಡುತ್ತಿರುವ ವದಂತಿಗಳನ್ನು ಹಾಗೂ ಸದಸ್ಯರ ನಡುವಿನ ಗೊಂದಲವನ್ನು ತೆರವುಗೊಳಿಸುವುದೇ ಈ ಸಂದೇಶದ ಪ್ರಮುಖ ಉದ್ದೇಶ. ಆದಷ್ಟು ಬೇಗ ರಾಜೀನಾಮೆಗೆ ಮುಖ್ಯ ಕಾರಣವನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.

- Advertisement -

ತನ್ನೊಟ್ಟಿಗೆ ಹಿದಾಯ ಫೌಂಡೇಶನ್ ನ್ನು ಈ ಮಟ್ಟಕ್ಕೇರಿಸಲು ಆರ್ಥಿಕವಾಗಿ ಮತ್ತು ದೈಹಿಕವಾಗಿ ಸಹಕರಿಸಿದ ಎಲ್ಲ ಯುನಿಟ್ ನ ಸದಸ್ಯರು, ಹಿತೈಷಿಗಳು ಹಾಗೂ ದಾನಿಗಳು ಅದನ್ನು ಮುಂದುವರಿಸಿ, ಮುಂದಿನ ದಿನಗಳಲ್ಲಿ ತಮ್ಮ ಸಂಪೂರ್ಣ ಸಹಕಾರವನ್ನು ಹಿದಾಯ ಫೌಂಡೇಶನ್ ಗೆ ನೀಡಬೇಕೆಂದು ಎಲ್ಲರಲ್ಲಿ ಆಸಿಫ್ ಡೀಲ್ಸ್ ರವರು ವಿನಮ್ರವಾಗಿ ವಿನಂತಿಸಿದ್ದಾರೆ. ಹಾಗೂ ಹಿದಾಯ ಫೌಂಡೇಶನ್ ನ ಭವಿಷ್ಯದ ಎಲ್ಲ ಕಾರ್ಯಕ್ರಮಗಳಿಗೆ ಯಾವುದೇ ಕುಂದುಂಟಾಗಬಾರದೆಂದು ತಾನು ರಾಜೀನಾಮೆಯ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

Join Whatsapp