ಉತ್ತರ ಪ್ರದೇಶ : 2 ಕೋಟಿ ರೂ. ಒತ್ತೆ ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿ, ಹತ್ಯೆ ಮಾಡಿ, ಕೋವಿಡ್‌ ಮೃತದೇಹದಂತೆ ಅಂತ್ಯ ಸಂಸ್ಕಾರ ಮಾಡಿದ ದುಷ್ಕರ್ಮಿಗಳು

Prasthutha|

ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿ 23ರ ಹರೆಯದ ಯುವಕನೊಬ್ಬನನ್ನು ಹತ್ಯೆ ಮಾಡಿ, ಆತ ಅಪಹರಣಕ್ಕೊಳಗಾಗಿರುವುದಾಗಿ ಹೇಳಿ, 2 ಕೋಟಿ ರೂ. ಒತ್ತೆ ಹಣಕ್ಕೆ ಬೇಡಿಕೆಯಿಡಲು ಮುಂದಾದ ಘಟನೆ ನಡೆದಿದೆ. ಅಲ್ಲದೆ, ಕೋವಿಡ್‌ ಸೋಂಕಿಗೆ ಗುರಿಯಾದವರನ್ನು ಶವಸಂಸ್ಕಾರ ನಡೆಸಿದಂತೆ ಮೃತನ ಶವಸಂಸ್ಖಾರವನ್ನೂ ಮಾಡಿದ ಬಗ್ಗೆ ವರದಿಯಾಗಿದೆ.

- Advertisement -

ಹತ್ಯೆ ನಡೆಸಿದವರು ಸ್ವತಃ ಮೃತ ವ್ಯಕ್ತಿಯ ಸ್ನೇಹಿತ ಮತ್ತು ಆತನ ಸಹಚರರು ಎಂದು ಗುರುತಿಸಲಾಗಿದೆ. ಕೋಲ್ಡ್‌ ಸ್ಟೋರೇಜ್‌ ಮಾಲಕರೊಬ್ಬರ ಮಗ ಸಚಿನ್‌ ಚೌಹಾಣ್‌ ಜೂ. 21ರಂದು ಆಗ್ರಾದ ನೀರಾವರಿ ಸ್ಥಾವರವೊಂದರ ಬಳಿ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿದ್ದರು. ಇದೇ ವೇಳೆ ಆತನನ್ನು ಸ್ನೇಹಿತರೇ ಲ್ಯಾಮಿನೇಶನ್‌ ಪೇಪರ್‌ ಬಳಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಇದೊಂದು ಕೋವಿಡ್‌ ಸಾವು ಎಂಬಂತೆ ಬಿಂಬಿಸಲು ಅವರು ಯತ್ನಿಸಿದ್ದರು.

ಸಚಿನ್‌ ನಾಪತ್ತೆಯಾಗಿದ್ದುದರಿಂದ ಆತನ ಹೆತ್ತವರು ಪೊಲೀಸ್‌ ದೂರು ನೀಡಿದ್ದರು. ಸಚಿನ್‌ ಹತ್ಯೆ ಮಾಡಿದ ಬಳಿಕ, ಆತನ ಕುಟುಂಬದಿಂದ ಎರಡು ಕೋಟಿ ರೂ. ಒತ್ತೆ ಹಣ ಪಡೆಯಲು ಸ್ನೇಹಿತರು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಸಾಂಕ್ರಾಮಿಕತೆಯ ಈ ಸಮಯದಲ್ಲಿ ಯಾರೊಬ್ಬರೂ ಸಂಶಯ ಪಡಬಾರದು ಎಂಬಂತೆ ದುಷ್ಕರ್ಮಿಗಳು, ಪಿಪಿಇ ಕಿಟ್‌ ಧರಿಸಿ ಸ್ಮಶಾನಕ್ಕೆ ಮೃತದೇಹವನ್ನು ಕೊಂಡೊಯ್ದಿದ್ದರು. 25 ದಿನಗಳ ಹಿಂದೆಯೇ ದುಷ್ಕರ್ಮಿಗಳು ಸಚಿನ್‌ ನನ್ನು ಹತ್ಯೆ ಮಾಡಿ ಆತನ ಕುಟುಂಬದಿಂದ ಹಣ ಪಡೆಯು ಸಂಚನ್ನು ರೂಪಿಸಿದ್ದರು. ಐವರು ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

photo courtesy : ndtv



Join Whatsapp