ಅಬುಧಾಬಿ: ವಿಶ್ವದ ಅತಿದೊಡ್ಡ ಪದಕ ನಿರ್ಮಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್

Prasthutha|

ಅಬುಧಾಬಿ: ಇಲ್ಲಿನ ಪಶ್ಚಿಮ ಬನಿಯಾಸ್‌ನಲ್ಲಿರುವ ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್ ನ 450 ವಿದ್ಯಾರ್ಥಿಗಳು ವಿಶ್ವದ ಅತಿದೊಡ್ಡ ಪದಕ ನಿರ್ಮಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.
ಉಕ್ಕಿನಲ್ಲಿ ವಿನ್ಯಾಸಗೊಳಿಸಲಾದ ಈ ಪದಕವು ಸುಮಾರು 450 ಕೆಜಿ ತೂಕ ಮತ್ತು 5.93 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ಅಬುಧಾಬಿಯಲ್ಲಿ ಸ್ಥಾಪಿಸಲಾದ 68.5 ಕೆಜಿ ತೂಕ ಮತ್ತು 2.56 ಚದರ ಮೀಟರ್ ವಿಸ್ತೀರ್ಣವಿರುವ ಪದಕದ ದಾಖಲೆಯನ್ನು ಮುರಿದು ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್ ನಿರ್ಮಿಸಿದ ಹೊಸ ಪದಕ ಗಿನ್ನೆಸ್ ದಾಖಲೆಯನ್ನು ನಿರ್ಮಿಸಿದೆ.

- Advertisement -

ಶಾಲೆಯ ಪ್ರಾಂಶುಪಾಲರಾದ ಡಾ.ಬೆನೊ ಕುರಿಯನ್ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ನೌಕರರು ಮತ್ತು ಶಾಲಾ ವ್ಯವಸ್ಥಾಪಕ ನಿರ್ದೇಶಕ ಮುನೀರ್ ಅನ್ಸಾರಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಬುಧಾಬಿಯ ಒಬೈದ್ ಅಲ್ ಕೆತ್ ಬೀ ನಿರ್ಮಿಸಿದ್ದ ಗಿನ್ನೆಸ್ ದಾಖಲೆಯನ್ನು ಈ ಹೊಸ ಪದಕ ಮುರಿದಿದೆ ಎಂದು ಈ ವೇಳೆ ಗಿನ್ನೆಸ್ ಪ್ರತಿನಿಧಿ ಕಾನ್ಸೀ ಎಲ್. ಡಿಫ್ರಾವಿ ಘೋಷಿಸಿದರು.

Join Whatsapp