ದಲಿತ ಬಾಲಕಿಯರ ನಿಗೂಢ ಸಾವು | ಕೈ, ಕುತ್ತಿಗೆ ಶಾಲಿನಿಂದ ಕಟ್ಟಲಾಗಿತ್ತು, ಬಟ್ಟೆ ಹರಿದಿತ್ತು ಎಂದ ತಾಯಿ

Prasthutha|

ಉನ್ನಾವೋ : ಉತ್ತರ ಪ್ರದೇಶದ ಉನ್ನಾವೋದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಇಬ್ಬರು ದಲಿತ ಬಾಲಕಿಯರ ಅಂತ್ಯ ಸಂಸ್ಕಾರ ಪೊಲೀಸರ ಭಿಗಿ ಬಂದೋವಸ್ತಿನಲ್ಲಿ ನಡೆದಿದೆ. ಮೃತ ಇಬ್ಬರು ಬಾಲಕಿಯರ ಕೈ ಕುತ್ತಿಗೆಗಳನ್ನು ಶಾಲಿನಿಂದ ಕಟ್ಟಲಾಗಿತ್ತು, ಅವರ ಬಟ್ಟೆಗಳು ಹರಿದು ಹೋಗಿತ್ತು ಎಂದು ಮೃತ ಬಾಲಕಿಯೊಬ್ಬಳ ತಾಯಿ ಹೇಳಿದ್ದಾರೆ. ಮೂವರಲ್ಲಿ ಹಿರಿಯವಯಸ್ಸಿನ ಮೂರನೇ ಹೆಣ್ಣು ಮಗಳು ಕಾನ್ಪುರ ನಗರದ ಆಸ್ಪತ್ರೆಯೊಂದರಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾಳೆ. ಮೂವರೂ ಗೆಳತಿಯರಾಗಿದ್ದು, ಜೊತೆಯಾಗಿ ಓದು ಮತ್ತು ಆಟವಾಡುತ್ತಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

- Advertisement -

ಇಬ್ಬರು ಬಾಲಕಿಯರ ಶವಗಳು ಪತ್ತೆ ಯಾಗಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಗುರುವಾರ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಹೇಳಿದ್ದರು. ಆದರೆ ಈ ಕುರಿತು ಮಾತನಾಡಿದ ಓರ್ವ ಮೃತ ಬಾಲಕಿಯ ತಾಯಿ . ಮೃತ ಇಬ್ಬರು ಬಾಲಕಿಯರನ್ನು ಶಾಲಿನಿಂದ ಕಟ್ಟಲಾಗಿತ್ತು ಎಂದು ಹೇಳಿದ್ದಾರೆ. ಅವರ ಬಟ್ಟೆಗಳು ಹರಿದು ಹೋಗಿವೆ. ಕೈ, ಕುತ್ತಿಗೆಗಳನ್ನು ಶಾಲಿನಿಂದ ಕಟ್ಟಲಾಗಿತ್ತು. ನಾನು ಅವುಗಳನ್ನು ಬಿಚ್ಚಿದೆ.’ ಎಂದು ಅವರು ಹೇಳಿದ್ದಾರೆ.
ಯಾರ ಮೇಲೆಯೂ ಅನುಮಾನ ಇದೆಯಾ ಎಂಬ ಪ್ರಶ್ನೆಗೆ, ‘ಗ್ರಾಮದಲ್ಲಿ ಯಾರೊಂದಿಗೂ ನಮಗೆ ಯಾವುದೇ ವೈರತ್ವ ಇರಲಿಲ್ಲ. ನಮ್ಮ ವಿರುದ್ಧ ಇದೇ ಮೊದಲ ಬಾರಿಗೆ ಅಕ್ರಮ ನಡೆದಿದೆ’ ಎಂದು ದೂರಿದ್ದಾರೆ.

- Advertisement -

ವೈದ್ಯಕೀಯ ಆರೈಕೆಯಲ್ಲಿದ್ದ ಬಾಲಕಿ ಕಳೆದ ವರ್ಷ ತಂದೆಯನ್ನು ಕಳೆದುಕೊಂಡಿದ್ದಾಳೆ. 10ನೇ ತರಗತಿ ಪಾಸ್ ಮಾಡಿದ್ದಳು. ಆಕೆಗೆ ನಾಲ್ವರು ಸಹೋದರಿಯರು ಮತ್ತು ಇಬ್ಬರು ಸಹೋದರರು ಇದ್ದಾರೆ. ಸದ್ಯ ಲಕ್ನೋದ ಆರು ವೈದ್ಯರ ತಂಡ ಆಕೆಯ ಆರೋಗ್ಯದ ಮೇಲೆ ನಿಗಾ ಇಡುತ್ತಿದೆ. ‘ಹುಡುಗಿಯರು ಓದಿನಲ್ಲಿ ಚೆನ್ನಾಗಿದ್ದರು, ಅವರು ನಿಯಮಿತವಾಗಿ ಶಾಲೆಗೆ ಹೋಗುತ್ತಿದ್ದರು. ಕೋವಿಡ್-19 ಕಾರಣ ಅವರು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದರು.’

ಈ ಮೂವರು ಬಾಲಕಿಯರಿಗೆ ಏನಾಗಿರಬಹುದು ಎಂದು ಕೇಳಿದಾಗ, ‘ವಿಷ ಸೇವಿಸಲು ಸಾಧ್ಯವಿಲ್ಲ. ಅವರ ಕೈ ಮತ್ತು ಕುತ್ತಿಗೆಯನ್ನು ಶಾಲಿನಿಂದ ಕಟ್ಟಲಾಗಿತ್ತು’ ಎಂದು ಅವರು ಹೇಳಿದ್ದಾರೆ.

Join Whatsapp