ವಿವಸ್ತ್ರಗೊಳ್ಳುವುದು ಕೂಡ ಮೂಲಭೂತ ಹಕ್ಕು: ಹಿಜಾಬ್ ನಿಷೇಧದ ಕುರಿತು ಸುಪ್ರೀಮ್ ಕೋರ್ಟ್

Prasthutha|

ನವದೆಹಲಿ: ಕರ್ನಾಟಕ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟ್, ಸಂವಿಧಾನ 19ನೇ ಪರಿಚ್ಛೇದದ ಅಡಿಯಲ್ಲಿ ಉಡುಗೆ ತೊಡೆಗೆಯನ್ನು ಸಂಪೂರ್ಣ ಮೂಲಭೂತ ಹಕ್ಕು ಎಂದು ಹೇಳಿದೆ. ಜೊತೆಗೆ ವಿವಸ್ತ್ರಗೊಳ್ಳುವುದು ಕೂಡ ಒಂದು ಹಕ್ಕು ಎಂದು ಬಧವಾರ ಅರ್ಜಿದಾರರಿಗೆ ತಿಳಿಸಿದೆ.

- Advertisement -

ನ್ಯಾಯಮೂರ್ತಿ ಹೇಮಂತಿ ಗುಪ್ತಾ ನೇತೃತ್ವದ ಪೀಠ, ಆರ್ಟಿಕಲ್ 19ರ ಅನ್ವಯ ಉಡುಗೆ ತೊಡುವ ಹಕ್ಕನ್ನು ತರ್ಕಬದ್ಧವಲ್ಲದ ಕಡೆಗೆ ಕೊಂಡೊಯ್ಯಬಹುದೇ ಎಂದು ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ತ್ ಕಾಮತ್ ಅವರನ್ನು ಪ್ರಶ್ನಿಸಿದೆ.

ಹಿಜಾಬ್ ನಿಷೇಧಕ್ಕೆ ಸಂಬಂಧಿಸಿದಂತೆ ಕಾಮತ್ ಕಲಂ 19 (1) ರ ಅಡಿಯಲ್ಲಿ ಉಡುಗೆ ತೊಡುಗೆಯ ಹಕ್ಕನ್ನು ಮೂಲಭೂತ ಹಕ್ಕು ಎಂದು ವಾದಿಸಲು ಸುಪ್ರೀಮ್ ಕೋರ್ಟ್ 2014ರಲ್ಲಿ ನೀಡಿದ NALSA ತೀರ್ಪನ್ನು ಉಲ್ಲೇಖಿಸಿದ್ದಾರೆ.

- Advertisement -

ಅದಕ್ಕೆ ನ್ಯಾಯಮೂರ್ತಿ ಗುಪ್ತಾ, ನಾವು ಇದನ್ನು ತರ್ಕಬದ್ಧವಲ್ಲದ ಕಡೆಗೆ ಕೊಂಡೊಯ್ಯಲು ಸಾಧ್ಯವಿಲ್ಲ. ನೀವು ಬಟ್ಟೆ ಧರಿಸುವುದು ಮೂಲಭೂತ ಹಕ್ಕು ಎಂದು ಹೇಳಿದರೆ ಬಟ್ಟೆ ಬಿಚ್ಚುವ ಹಕ್ಕು ಕೂಡ ಮೂಲಭೂತ ಹಕ್ಕು ಆಗುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ವಕೀಲರಾದ ಕಾಮತ್, ಶಾಲೆಯಲ್ಲಿ ಯಾರೂ ಬಟ್ಟೆ ಬಿಚ್ಚಿಸುವುದಿಲ್ಲ ಎಂಬ ಅಂಶವನ್ನು ಸಾಬೀತುಪಡಿಸುತ್ತಿದ್ದೇನೆ ಎಂದು ನ್ಯಾಯಾಧೀಶರಿಗೆ ತಿಳಿಸಿದರು. ವಸ್ತ್ರಧಾರಣೆಯ ಹಕ್ಕನ್ನು ಯಾರೂ ನಿರಾಕರಿಸುತ್ತಿಲ್ಲ ಎಂದು ನ್ಯಾಯಮೂರ್ತಿ ಗುಪ್ತಾ ಅವರು ತನ್ನ ನಿಲುವನ್ನು ಸಮರ್ಥಿಸಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಮತ್, ಹೆಚ್ಚುವರಿ ಉಡುಪು ( ಹಿಜಾಬ್ ) ಧರಿಸುವುದನ್ನು 19ನೇ ವಿಧಿಯ ಆಧಾರದ ಮೇಲೆ ನಿರ್ಬಂಧಿಸಬಹುದೇ ಎಂದು ಕೇಳಿದ್ದಾರೆ. ಹಿಜಾಬ್ ಯಾವುದೇ ಸಾರ್ವಜನಿಕ ಸಮಸ್ಯೆಯನ್ನು ಸೃಷ್ಟಿಸುವುದಿಲ್ಲ ಮತ್ತು ನೈತಿಕತೆಗೆ ವಿರುದ್ಧವಾಗಿಲ್ಲ ಎಂದು ಅವರು ತನ್ನ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.

ಹಿಜಾಬ್ ಧರಿಸುವಂತೆ ಯಾರೂ ಕೂಡ ಸ್ತ್ರೀಯನ್ನು ಬಲವಂತಪಡಿಸಿಲ್ಲ. ಆದರೆ ಆಕೆ ಅದನ್ನು ಸ್ವ-ಇಚ್ಛೆಯಿಂದ ಧರಿಸಲು ನಿರ್ಧರಿಸಿದರೆ ಅದನ್ನು ನಿಷೇಧಿಸಬಹುದೇ ಎಂದು ಕಾಮತ್ ನ್ಯಾಯಾಧೀಶರಲ್ಲಿ ಕೇಳಿದ್ದಾರೆ.

ಯಾರೂ ಆಕೆಗೆ ಹಿಜಾಬ್ ಧರಿಸುವುದನ್ನು ನಿಷೇಧಿಸುತ್ತಿಲ್ಲ. ಆದರೆ ಶಾಲೆಯಲ್ಲಿ ಅಷ್ಟೇ ನಿಷೇಧಿದೆ ಎಂದು ನ್ಯಾಯಮೂರ್ತಿ ಗುಪ್ತಾ ಪ್ರತಿಕ್ರಿಯಿಸಿದ್ದಾರೆ. ಮುಂದಿನ ವಿಚಾರಣೆ ನಾಳೆ ಬೆಳಗ್ಗೆ 11.30ಕ್ಕೆ ನಡೆಯಲಿದೆ.

Join Whatsapp