ಏಷ್ಯಾ ಕಪ್‌: ಫೈನಲ್‌ ಭರವಸೆ ಕೈ ಬಿಡದ ಭಾರತ, ಹೀಗಿದೆ ಲೆಕ್ಕಾಚಾರ !

Prasthutha|

ಯುಎಇಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತದ ಅಭಿಯಾನ ಬಹುತೇಕ ಅಂತ್ಯವಾಗಿದೆ. ಲೀಗ್‌ ಹಂತ ದಾಟಿದರೂ ಸಹ, ಸೂಪರ್‌-4 ಹಂತದ ಒಟ್ಟು ಮೂರು ಪಂದ್ಯಗಳಲ್ಲಿ, ಈಗಾಗಲೇ ಎರಡು ಪಂದ್ಯಗಳಲ್ಲಿ ರೋಹಿತ್‌ ಪಡೆ ಮುಗ್ಗರಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಎರಡನೇ ಪಂದ್ಯದಲ್ಲಿ ಶ್ರೀಲಂಕಾಗೆ ಶರಣಾಗಿದೆ. ಎರಡೂ ಪಂದ್ಯಗಳು ಅಂತಿಮ ಓವರ್‌ವರೆಗೂ ಸಾಗಿ ಬಂದಿತ್ತಾದರೂ, ಗೆಲುವು ದಕ್ಕಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಿರಲಿಲ್ಲ.

- Advertisement -

ಸೂಪರ್‌-4 ಹಂತದಲ್ಲಿ ಆಡಿದ ಎರಡು ಪಂದ್ಯಗಳನ್ನು ಗೆದ್ದಿರುವ ಶ್ರೀಲಂಕಾ, ಬಹುತೇಕ ಫೈನಲ್‌ನಲ್ಲಿ ತನ್ನ ಸ್ಥಾನವನು ಭದ್ರಪಡಿಸಿಕೊಂಡಿದೆ. ಮತ್ತೊಂದೆಡೆ ಭಾರತದ ವಿರುದ್ಧ ಮೊದಲ ಪಂದ್ಯವನ್ನು ಗೆದ್ದಿರುವ ಪಾಕಿಸ್ತಾನ, ಬುಧವಾರ ಅಫ್ಘಾನಿಸ್ತಾನದ ಸವಾಲನ್ನು ಎದುರಿಸಲಿದೆ. ಈ ಪಂದ್ಯವನ್ನೂ ಪಾಕ್‌ ಗೆದ್ದರೆ ಫೈನಲ್‌ ಪ್ರವೇಶ ಸುಗಮವಾಗಲಿದೆ.

ಆದರೆ ಎರಡು ಪಂದ್ಯಗಳನ್ನು ಸೋತ ಬಳಿಕವೂ,  ಫೈನಲ್‌ ಪ್ರವೇಶಿಸುವ ಆಸೆಯನ್ನು ಭಾರತ ಇನ್ನೂ ಕೈ ಬಿಟ್ಟಿಲ್ಲ. ಆದರೆ ಇದು ಶ್ರೀಲಂಕಾ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಿನ ಫಲಿತಾಂಶಗಳನ್ನು ಆಶ್ರಯಿಸಿದೆ.  

- Advertisement -

ಭಾರತದ ಫೈನಲ್‌ ಸಾಧ್ಯಾಸಾಧ್ಯತೆಯನ್ನು ನೋಡೋದಾದರೆ,

ಶ್ರೀಲಂಕಾ: ಮೂರು ಪಂದ್ಯಗಳಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಲಂಕಾ, ತನ್ನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರಿ ಅಂತರದಿಂದ ಮಣಿಸಬೇಕಾಗಿದೆ.

ಪಾಕಿಸ್ತಾನ: ಸೂಪರ್‌-4 ಹಂತದ ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಅಫ್ಘಾನ್‌ ಹುಡುಗರು ಗೆಲುವಿನ ಬಾವುಟ ಹಾರಿಸಿದರೆ, ಭಾರತದ ಫೈನಲ್‌ ಪ್ರವೇಶಿಸುವ ಆಸೆಗೆ ಸಣ್ಣ ಭರವಸೆ ಮೂಡಲಿದೆ. ಮತ್ತೊಂದೆಡೆ ಪಾಕಿಸ್ತಾನ ಗೆದ್ದರೆ ಭಾರತ, ಅಧಿಕೃತವಾಗಿ ಏಷ್ಯಾ ಕಪ್‌ ಟೂರ್ನಿಯಿಂದ ಹೊರಬೀಳಲಿದೆ.  ಹೀಗಾಗಿ, ಇಂದಿನ ಪಂದ್ಯದಲ್ಲಿ ಟೀಮ್‌ ಇಂಡಿಯಾ ಅಭಿಮಾನಿಗಳು ಅಪ್ಘಾನ್‌ ಗೆಲುವಿಗೆ ಪ್ರಾರ್ಥಿಸುವುದು ನಿಶ್ಚಿತ. ಸೂಪರ್‌-4 ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ-ಪಾಕಿಸ್ತಾ ಮುಖಾಮುಖಿಯಾಗಲಿದ್ದು, ಆ ಪಂದ್ಯದಲ್ಲೂ ಭಾರತದ ನೆರವಿಗೆ ಲಂಕಾ ಧಾವಿಸಬೇಕಿದೆ.

ಅಫ್ಘಾನಿಸ್ತಾನ: ಸೂಪರ್ 4 ಹಂತದ ತನ್ನ ಕೊನೆಯ ಪಂದ್ಯದಲ್ಲಿ ಭಾರತ, ಅಫ್ಘಾನಿಸ್ತಾವನ್ನು ಭಾರಿ ಅಂತರದಿಂದ ಮಣಿಸಬೇಕಿದೆ. ಅದಕ್ಕೂ ಮೊದಲು, ಬುಧವಾರದ ಪಂದ್ಯದಲ್ಲಿ ಅಫ್ಘಾನ್‌, ಪಾಕಿಸ್ತಾವನ್ನು ಸೋಲಿಸಬೇಕಿದೆ.

Join Whatsapp