ಉಜಿರೆ ಬಾಲಕನ ಅಪಹರಣಕ್ಕೆ 7 ಲಕ್ಷ ರೂ. ಸುಪಾರಿ ಕೊಡಲಾಗಿತ್ತು | ಕಿಡ್ನಾಪ್ ಕೇಸ್ ಬಗ್ಗೆ ಹೆಚ್ಚಿನ ಮಾಹಿತಿ

Prasthutha|

ಮಂಗಳೂರು : ಉಜಿರೆಯ ರಥಬೀದಿಯಲ್ಲಿ ಮನೆಯವರ ಮುಂದೆಯೇ ಬಾಲಕ ಅನುಭವ್ ನನ್ನು ಅಪಹರಿಸಲು, ಆತನ ಕುಟುಂಬಕ್ಕೆ ಗೊತ್ತಿದ್ದ ವ್ಯಕ್ತಿಯೊಬ್ಬ 7 ಲಕ್ಷ ರೂ. ಸುಪಾರಿ ಕೊಟ್ಟಿದ್ದ. ಆತನ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಹೇಳಿದ್ದಾರೆ. ಅವರು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಉಜಿರೆಯ ಅನುಭವ್ ನನ್ನು ದುಷ್ಕರ್ಮಿಗಳ ಬಲೆಯಿಂದ ಬಿಡಿಸಿದ ಮತ್ತು ಆರೋಪಿಗಳನ್ನು ಬಂಧಿಸಿದ ಕುರಿತು ವಿವರಗಳನ್ನು ನೀಡಿದರು.

ಮಂಡ್ಯದ ರಂಜಿತ್ (22), ಹನುಮಂತ್ (21), ಮೈಸೂರಿನ ಗಂಗಾಧರ (25), ಬೆಂಗಳೂರಿನ ಕಮಲ್ (22), ಮಂಜುನಾಥ್ (24) ಮತ್ತು ಮಹೇಶ್ (26) ಮುಂತಾದ ಆರು ಮಂದಿಯನ್ನು ಬಂಧಿಸಲಾಗಿದೆ.

- Advertisement -

ಬಾಲಕ ಕೋಲಾರದಲ್ಲಿ ಪತ್ತೆಯಾಗಿದ್ದಾನೆ. ಸದ್ಯ ಆರು ಮಂದಿಯನ್ನು ಬಂಧಿಸಿದ್ದೇವೆ. ಈ ಆರು ಜನ ಅಪಹರಣ ಮಾಡಿದ್ದು, ಆದರೆ ಇವರಿಗೆ ಅನ್ಯ ವ್ಯಕ್ತಿ ಸುಪಾರಿ ಕೊಟ್ಟಿದ್ದ ಎಂದು ಅವರು ತಿಳಿಸಿದ್ದಾರೆ.

ನಮ್ಮ ನಾಲ್ಕು ತಂಡ ಹಾಸನ, ಬೆಂಗಳೂರು, ಮೂಡಿಗೆರೆ, ಮದುಗಿರಿಯಲ್ಲಿ ಕಾರ್ಯಾಚರಿಸಿತ್ತು. ಮದುಗಿರಿಯಲ್ಲಿ ಒಂದಷ್ಟು ಮಾಹಿತಿ ಲಭ್ಯವಾಯಿತು ಎಂದು ಅವರು ಕಾರ್ಯಾಚರಣೆಯ ಮಾಹಿತಿ ನೀಡಿದ್ದಾರೆ.

ಬಾಲಕನ ತಂದೆ ಈ ಹಿಂದೆ ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿದ್ದರು. ಆದರೆ, ಮೌಲ್ಯ ಕುಸಿದಾಗ ಅವರು ಅದನ್ನು ಮಾರಾಟ ಮಾಡಿದ್ದಾರೆ. ಬಂಧಿತರಿಗೆ ಕುಟುಂಬದ ಪರಿಚಯ ಇಲ್ಲ. ಆದರೆ, ಕುಟುಂಬದ ಪರಿಚಯಸ್ಥನೊಬ್ಬ ಈ ಸುಪಾರಿ ನೀಡಿದ್ದಾನೆ. ಅಪಹರಿಸಿದ ಬಳಿಕ ಸುಳ್ಯ, ಮಡಿಕೇರಿ, ಮಂಡ್ಯ ಮೂಲಕ ಆರೋಪಿಗಳು ಕೋಲಾರ ತಲುಪಿದ್ದಾರೆ. ಎಲ್ಲೂ ನಿಂತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

- Advertisement -