ಉಡುಪಿ: ದೇಶ ವಿರೋಧಿ ಫ್ಲೆಕ್ಸ್ ಗೆ ಪೊಲೀಸರಿಂದ ಕಾವಲು

Prasthutha|

ISIS ರೀತಿಯಲ್ಲಿ ಕಂಡುಬಂದ ಬ್ಯಾನರ್

ಉಡುಪಿ: ಬಿಜೆಪಿ ಯುವ ಮೋರ್ಚಾದ ವತಿಯಿಂದ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹಾಕಿರುವ ಬ್ರಿಟಿಷರೊಂದಿಗೆ ಕ್ಷಮೆ ಕೇಳಿ ಸ್ವಾತಂತ್ರ್ಯ ಹೋರಾಟದಿಂದ ಹಿಂದೆ ಸರಿದ ಸಾರ್ವಕರ್ ಬ್ಯಾನರಿಗೆ ಪೊಲೀಸರೇ ರಕ್ಷಣೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

- Advertisement -


ISIS ರೀತಿಯಲ್ಲಿ ಈ ಬ್ಯಾನರ್ ಕಂಡು ಬಂದಿದ್ದು, ಸಂವಿಧಾನ ವಿರೋಧಿಯಾಗಿ “ಜೈ ಹಿಂದೂ ರಾಷ್ಟ್ರ” ಎಂದು ಬರೆಯಲಾಗಿದೆ. ಜಾತ್ಯತೀತ, ಪ್ರಜಾಪ್ರಭುತ್ವ ದೇಶವನ್ನು ಅವಹೇಳನಗೈಯ್ಯುವ ರೀತಿಯಲ್ಲಿ ಹಿಂದೂ ರಾಷ್ಟ್ರ ಎಂದು ಬ್ಯಾನರ್ ಹಾಕುವುದು ದೇಶ ವಿರೋಧಿ ಕೃತ್ಯವಾಗಿದೆ. ಇಂತಹ ಬ್ಯಾನರ್ ಗಳನ್ನು ತೆರವು ಮಾಡಬೇಕಾದ ಪೊಲೀಸರೇ ರಕ್ಷಣೆ ನೀಡುವುದು ಸಂವಿಧಾನ ವಿರೋಧಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ಕಡೆ ಇಡೀ ವಿಶ್ವವೇ ಗೌರವ ಕೊಡುವ ರಾಷ್ಟ್ರಪಿತ ಮಹಾತ್ಮ ಗಾಂಧಿಗೂ ಅವಮಾನ ಮಾಡಲಾಗಿದ್ದು, ಸ್ವಾತಂತ್ರ್ಯವು ಅಹಿಂಸೆಗೆ ಬ್ರಿಟಿಷರಿಂದ ಸಿಕ್ಕ ಭಿಕ್ಷೆಯಲ್ಲ ಎಂದು ವಿವಾದಾತ್ಮಕವಾಗಿ ಬರೆಯಲಾಗಿದೆ.


ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಸಂಘಪರಿವಾರದ ಪುಂಡರ ಇಂತಹ ಬ್ಯಾನರ್ ಗಳಿಗೆ ಪೊಲೀಸರು ಈ ರೀತಿ ರಕ್ಷಣೆ ನೀಡಿರುವುದು ಸರಿ ಅಲ್ಲ, ಜಾತ್ಯತೀತ ದೇಶದಲ್ಲಿ ಈ ರೀತಿಯ ಬರವಣಿಗೆ ಅಪಾಯಕಾರಿ ಎಂದು ಹೇಳಿದ್ದಾರೆ. ಅಲ್ಲದೆ, ಬ್ರಿಟಿಷರಿಗೆ ಕ್ಷಮಾಪಣೆ ಕೇಳಿದವನ ಬ್ಯಾನರ್ ಅಳವಡಿಕೆಗೆ ಸಹಕರಿಸುವುದು ಎಷ್ಟು ಸರಿ ? ಇವರ ಬ್ಯಾನರ್ ಗೂ ಐಎಸ್ ಐಎಸ್ ನವರ ಬ್ಯಾನರ್ ಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದ್ದಾರೆ.

- Advertisement -