ದುಬೈ ಪ್ರಯಾಣದ ಹಿನ್ನೆಲೆ: ನವದೆಹಲಿ ಏರ್ಪೋರ್ಟ್ ನಲ್ಲಿ ಕೋವಿಡ್ ಪಿಸಿಆರ್ ಟೆಸ್ಟ್ ಗೆ 5000 ರೂ.

Prasthutha|

ನವಹೆದಲಿ: ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತ್ವರಿತ ಪಿಸಿಆರ್ ಪರೀಕ್ಷಾ ವ್ಯವಸ್ಥೆಗೊಳಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಯುಎಇ ಗೆ ಪ್ರಯಾಣ ಬೆಳೆಸುವವರಿಗೆ ಪಿಸಿಆರ್ ಟೆಸ್ಟ್ ಕಡ್ಡಾಯವಾಗಿದ್ದು, ಪ್ರತಿ ಪ್ರಯಾಣಿಕರು 250 ದಿರ್ಹಂ (5೦00 ರುಪಾಯಿ) ಪಾವತಿಸುವ ಮೂಲಕ ಈ ಟೆಸ್ಟ್ ಮಾಡಿಸಬೇಕಾಗಿದೆ.

- Advertisement -

ಭಾರತದಿಂದ ಪ್ರಯಾಣಿಕರ ಮೇಲಿನ ಸಂಚಾರದ ನಿರ್ಬಂಧವನ್ನು ಯುಎಇ ಸರ್ಕಾರ ತೆಗೆದುಹಾಕಿದ ನಂತರ ದೆಹಲಿ, ಚೆನ್ನೈ, ಕೊಚ್ಚಿ, ಬೆಂಗಳೂರು ಮತ್ತು ತಿರುವನಂತಪುರಂ ನಿಂದ ವಿಮಾನಗಳ ಸಂಚಾರ ಪುನಾರಂಭಗೊಂಡಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಯುಎಇ ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಸೇವೆ ಒದಗಿಸಲು ಯೋಜನೆ ಹಾಕಿಕೊಂಡಿದೆ.

ಯುಎಇ ಸರ್ಕಾರ ಇತ್ತೀಚೆಗೆ ಹೊರಡಿಸಿದ ನೂತನ ಕೋವಿಡ್ ಮಾರ್ಗಸೂಚಿಯನ್ವಯ ಪ್ರಯಾಣಕ್ಕೆ ಮೊದಲು ಪಿಸಿಆರ್ ಟೆಸ್ಟ್ ವರದಿ ಕಡ್ದಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೆನ್ ಸ್ಟರಿಂಗ್ಸ್ ಡಯಾಗ್ನೋಸ್ಟಿಕ್ ಸೆಂಟರ್ ವತಿಯಿಂದ ತ್ವರಿತ ಪಿಸಿಆರ್ ಪರೀಕ್ಷೆಗಾಗಿ ವ್ಯವಸ್ಥೆಗೊಳಿಸಲಾಗಿದೆ. ಪ್ರಸಕ್ತ 50 ಪಿಸಿಆರ್ ಟೆಸ್ಟ್ ಯಂತ್ರಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, ಬೇಡಿಕೆ ಹೆಚ್ಚಾದಂತೆ ಈ ಯಂತ್ರಗಳನ್ನು ದ್ವಿಗುಣಗೊಳಿಸುವ ಯೋಜನೆಯನ್ನು ಹಮ್ಮಿಕೊಂಡಿವೆ. ಪ್ರತಿ ಪ್ರಯಾಣಿಕ ಈ ಪರೀಕ್ಷೆಗಾಗಿ 45-60 ನಿಮಿಷವನ್ನು ವ್ಯಯಿಸಬೇಕಾಗಿದ್ದು, ಪಿಸಿಆರ್ ಪರೀಕ್ಷೆಗೆ 5000 ರುಪಾಯಿಯನ್ನು ಖರ್ಚು ಮಾಡಬೇಕಾಗಿದೆಯೆಂದು ಜೆನ್ ಸ್ಟರಿಂಗ್ಸ್ ಡಯಾಗ್ನೋಸ್ಟಿಕ್ ಸೆಂಟರ್ನ ಸ್ಥಾಪಕ-ನಿರ್ದೇಶಕಿ ಡಾ. ಗೌರಿ ಅಗರ್ವಾಲ್ ಹೇಳಿದರು.

Join Whatsapp