ಯುಎಇ: ಕೆಲವು ಆಯ್ದ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಕಡ್ಡಾಯವಲ್ಲ

Prasthutha|

ಅಬುಧಾಬಿ: ಯುಎಇ ಯಲ್ಲಿ ಇನ್ನು ಮುಂದಕ್ಕೆ ಆಯ್ದ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿಕೊಂಡು ಪ್ರವೇಶಿಸಬೇಕಾಗಿಲ್ಲ ಎಂದು ಆರೋಗ್ಯ ಸಚಿವಾಲಯ ಮತ್ತು ರಾಷ್ಟ್ರೀಯ ತುರ್ತು ಪರಿಸ್ಥಿತಿ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ ತನ್ನ ಜಂಟಿ ಹೇಳಿಕೆಯಲ್ಲಿ ಬುಧವಾರ ಘೋಷಿಸಿದೆ

ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಯಾಮ ಸಂದರ್ಭ, ಒಂದೇ ಮನೆಯಲ್ಲಿ ವಾಸವಿರುವವರು ಖಾಸಗಿ ವಾಹನದಲ್ಲಿ ಪ್ರಯಾಣದ ಸಂದರ್ಭ, ಬೀಚ್ ಮತ್ತು ತೆರೆದ ಈಜುಕೊಳದಲ್ಲಿ ಜನರು ಮಾಸ್ಕ್ ಧರಿಸುವ ಅಗತ್ಯವಿಲ್ಲ. ಅದೇ ರೀತಿ ಮುಚ್ಚಿದ ಸ್ಥಳಗಳಾದ ಕ್ಷೌರ ಅಂಗಡಿ, ಸೌಂದರ್ಯ ಕೇಂದ್ರ, ಸಲೂನ್, ವೈದ್ಯಕೀಯ ಕೇಂದ್ರ, ಚಿಕಿತ್ಸಾಲಯ ಸೇರಿದಂತೆ ಹಲವು ಕಡೆಗಳಲ್ಲಿ ಮುಖ ಮತ್ತು ತಲೆಗೆ ಸೇವೆಯನ್ನು ಪಡೆಯುವ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯವಲ್ಲ ಎಂದು ನೂತನ ಆದೇಶದಲ್ಲಿ ತಿಳಿಸಲಾಗಿದೆ.

- Advertisement -

ಮಾಸ್ಕ್ ಕಡ್ಡಾಯವಲ್ಲದ ಸ್ಥಳಗಳಲ್ಲಿ ಫಲಕಗಳನ್ನು ಅಳವಡಿಸುವ ಕಾರ್ಯದಲ್ಲಿ ಸ್ಥಳೀಯ ಅಧಿಕಾರಿಗಳು ನಿರತರಾಗಿದ್ದಾರೆ.

- Advertisement -