ಉತ್ತರ ಪ್ರದೇಶ ಪೊಲೀಸರಿಂದ ಖ್ಯಾತ ವಿದ್ವಾಂಸ ಮೌಲಾನ ಖಲೀಂ ಸಿದ್ದೀಖಿ ಬಂಧನ

Prasthutha|


ಮುಜಫ್ಫರ್ ನಗರ: ಡಾ.ಉಮರ್ ಗೌತಮ್ ಮತಾಂತರ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಕಲೀಂ ಸಿದ್ದೀಖಿ ಅವರನ್ನು ಉತ್ತರ ಪ್ರದೇಶದ ಎಟಿಎಸ್ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಕಾನೂನು ಸುವ್ಯವಸ್ಥೆ ಎಡಿಜಿಪಿ ಪ್ರಶಾಂತ್ ಕುಮಾರ್, ಮೌಲಾನಾ ಅವರ ಗುಂಪು, ಮತಾಂತರದಲ್ಲಿ ನೇರ ಸಂಬಂಧ ಹೊಂದಿದೆ ಎಂದು ಹೇಳಿದರು.

- Advertisement -


“ಈ ವರ್ಷಾರಂಭದಲ್ಲಿ ಆರೋಪಿಸಲಾದ ಕಾನೂನುಬಾಹಿರ ಗುಂಪು ಮತಾಂತರದಲ್ಲಿ ಮೌಲಾನಾ ಖಲೀಂ ನೇರ ಸಂಬಂಧ ಹೊಂದಿದ್ದಾರೆ. ತನಿಖೆಯಿಂದ ಮೌಲಾನಾ ಖಲೀಂ ಸಿದ್ದೀಖಿಯವರ ಟ್ರಸ್ಟ್ ಗೆ ಬಹರೈನ್ ನ 1.5 ಕೋಟಿ ಸಹಿತ ವಿದೇಶದಿಂದ 3 ಕೋಟಿ ರೂ. ಬಂದಿದೆ ಎಂದು ಹೇಳಿದರು.


ಸಿದ್ದೀಖಿಯವರು ನಡೆಸುತ್ತಿರುವ ಟ್ರಸ್ಟ್ ಗೆ ವಿದೇಶದಿಂದ ಹಣ ಬಂದಿದೆ ಎಂದು ಎಟಿಎಸ್ ಹೇಳಿದೆ. ಮೀರತ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದನ್ನು ಮುಗಿಸಿ ಮೌಲಾನಾ ಅವರು ರಾತ್ರಿ ಮುಜಫ್ಫರ್ ನಗರದ ಮನೆಗೆ ಹಿಂದಿರುಗುವಾಗ ಬಂಧಿಸಲಾಗಿದೆ. ಕೂಡಲೆ ಸಾರ್ವಜನಿಕರು ಲಿಸಾರಿಗೇಟ್ ಪೊಲೀಸ್ ಠಾಣೆಯೆದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಇದು ಮುಸ್ಲಿಮರ ಮೇಲಿನ ಜನಾಂಗೀಯ ದೌರ್ಜನ್ಯ ಎಂದು ದೆಹಲಿ ವಕ್ಫ್ ಬೋರ್ಡ್ ಅಧ್ಯಕ್ಷ ಹಾಗೂ ಆಮ್ ಆದ್ಮಿಪಕ್ಷದ ಅಮಾನುತುಲ್ಲಾ ಖಾನ್ ಟೀಕಿಸಿದ್ದಾರೆ. ಈ ವರ್ಷ ಜೂನ್ ನಲ್ಲಿ, ಯುಪಿ ಎಟಿಎಸ್, ಡಾ. ಮುಹಮ್ಮದ್ ಉಮರ್ ಗೌತಮ್ ಮತ್ತು ಮುಫ್ತಿ ಖಾಜಿ ಜಹಾಂಗೀರ್ ಖಾಸ್ಮಿ ಅವರನ್ನು ಬಲವಂತದ ಮತಾಂತರ ಆರೋಪದಲ್ಲಿ ಬಂಧಿಸಿತ್ತು.

- Advertisement -



Join Whatsapp