ಮಂಗಳೂರಿನಲ್ಲಿ ಬೆಸ್ತರ ಬಲೆಗೆ ಟೈಗರ್ ಶಾರ್ಕ್ । ವಾಪಾಸ್ ಸಮುದ್ರಕ್ಕೆ ಬಿಟ್ಟ ಮೀನುಗಾರರು

Prasthutha|

ಮಂಗಳೂರಿನ ಅರಬ್ಬೀ ಸಮುದ್ರದಲ್ಲಿ ಕಡಲ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಶ್ರೀದುರ್ಗಾ ಪರ್ಸಿನ್ ಬೋಟ್ನವರ ಬಲೆಗೆ ಬೃಹತ್ ಗಾತ್ರದ ಶಾರ್ಕ್ ಮೀನೊಂದು ಬಿದ್ದಿದೆ. ಆದರೆ ಮೀನುಗಾರರು ಮತ್ತೆ ಆ ಮೀನನ್ನು ಸುರಕ್ಷಿತವಾಗಿ ಕಡಲಿಗೆ ಬಿಟ್ಟಿದ್ದಾರೆ.

- Advertisement -

ಆಳ ಸಮುದ್ರ ಮೀನುಗಾರಿಕೆ ನಡೆಸುವ ಪರ್ಸಿನ್ ಬೋಟ್ನಲ್ಲಿ ಸಾಮಾನ್ಯವಾಗಿ ಕಿ.ಮೀ ಉದ್ದಕ್ಕೆ ಬಲೆಗಳನ್ನು ಹಾಕಿ ಮೀನು ಹಿಡಿಯಲಾಗುತ್ತದೆ. ಈ ಮೂಲಕ ನೀರಿನ ಮೇಲ್ಗಡೆ ಗುಂಪು ಗುಂಪಾಗಿ ಈಜುವ ಮೀನುಗಳಾದ ಬಂಗುಡೆ, ಬೂತಾಯಿ, ಸೀಗಡಿ ಮುಂತಾದ ಮೀನುಗಳನ್ನು ಹಿಡಿಯಲಾಗುತ್ತದೆ‌. ಆದರೆ ನಿನ್ನೆ ಮೀನುಗಾರಿಕೆಗೆ ತೆರಳಿದ್ದ ಶ್ರೀ ದುರ್ಗಾ ಪರ್ಸಿನ್ ಬೋಟ್ ನವರು ಗುಂಪಾಗಿರುವ ಬಂಗುಡೆ ಮೀನಿಗೆ ಬಲೆ ಹಾಕಿದ್ದಾರೆ. ಆದರೆ ಅದರಲ್ಲಿ ಬಂಗುಡೆ ಬದಲಿಗೆ ಬೃಹತ್ ಗಾತ್ರದ ಶಾರ್ಕ್ ಮೀನು ದೊರಕಿದೆ. ಮೈಯೆಲ್ಲಾ ಚುಕ್ಕಿ ಇರುವ ಟೈಗರ್ ಶಾರ್ಕ್ ಅನ್ನು ನೋಡಿ ಒಂದು ಸಲಕ್ಕೆ ಮೀನುಗಾರರೇ ಅಚ್ಚರಿಯಾಗಿದ್ದಾರೆ. ಆದರೆ ಮೀನುಗಾರರು ಈ ಟೈಗರ್ ಶಾರ್ಕ್ ಮೀನನ್ನು ಮೇಲೆ ಎಳೆಯದೆ ಸುರಕ್ಷಿತವಾಗಿ ಕಡಲಿಗೇ ಬಿಟ್ಟಿದ್ದಾರೆ.

Join Whatsapp