ಉತ್ತರ ಪ್ರದೇಶದ ಭಯಾನಕತೆ । ಮೂರರ ಹಸುಗೂಸಿಗೆ ಚಿಕಿತ್ಸೆ ನಿರಾಕರಣೆ : ಆಸ್ಪತ್ರೆ ಅಂಗಳದಲ್ಲೇ ಮಗು ಮೃತ್ಯು !

Prasthutha|

ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆಯನ್ನು ನಿರಾಕರಿಸಿದ್ದರಿಂದ 3 ವರ್ಷದ ಮಗುವೊಂದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದೆ. ಮಂಜಾನ್ಪುರದ ಕೌಶಂಬಿಯ ಕುಟುಂಬವೊಂದು ಮಗುವಿನ ವಿಶೇಷ ಸೋಂಕಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಿತ್ತು. ಪೋಷಕರ ಬಳಿ ಹಣವಿಲ್ಲದ ಕಾರಣ ವೈದ್ಯರು ಅಪರೇಷನ್ ಮಾಡಲು ನಿರಾಕರಿಸಿದ್ದರು ಎನ್ನಲಾಗಿದೆ. ಇದರಿಂದಾಗಿ ಮಗು ಆಸ್ಪತ್ರೆಯ ಆವರಣದಲ್ಲೇ ಮೃತಪಟ್ಟಿದೆ.

- Advertisement -

ಈ ಘಟನೆಯ ಟ್ವೀಟ್ ಒಂದು ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕರು ಆಸ್ಪತ್ರೆಯ ಅಮಾನವೀಯ ನಡೆಗೆ ಆಕ್ರೋಶಗೊಂಡಿದ್ದಾರೆ. ಮೃತಪಟ್ಟ ಮಗುವಿನ ಕುಟುಂಬಸ್ಥರು ಆಸ್ಪತ್ರೆಯ ನಿರ್ಲಕ್ಷ್ಯತೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಯಾಗ್ ರಾಜ್ ಜಿಲ್ಲಾಧಿಕಾರಿ ಚಂದ್ರ ಗೋಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

- Advertisement -