ತನ್ನ ಮೇಲಿನ ಐಟಿ ದಾಳಿ ಬಗ್ಗೆ ಮೌನ ಮುರಿದ ಬಾಲಿವುಡ್ ನಟಿ ತಾಪ್ಸೀ ಪನ್ನು

Prasthutha|

ಇತ್ತೀಚೆಗೆ ಬಾಲಿವುಡ್ ನಟಿ ತಾಪ್ಸೀ ಪನ್ನು ಆವರ ಆಸ್ತಿಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿ ನಡೆಸಿತ್ತು. ಈ ಬಗ್ಗೆ ನಟಿ ತಾಪ್ಸೀ ಪನ್ನು ಮೂರು ಟ್ವೀಟ್ ಗಳ ಮೂಲಕ ಪ್ರತಿಕ್ರಯಿಸಿದ್ದಾರೆ. ಮೊದಲನೇಯ ಟ್ವೀಟ್ನಲ್ಲಿ ಅವರು “ ಮೂರು ದಿನಗಳ ಕಾಲ ನಡೆದ ದಾಳಿಯಲ್ಲಿ ನನ್ನ ಬಂಗಲೆಯ ಕೀಗಳು ಪ್ಯಾರಿಸಿನಲ್ಲಿದೆ ಎಂದಿದ್ದಾರೆ .ಯಾಕೆಂದರೆ ಬೇಸಿಗೆ ಹತ್ತಿರ ಬರುತ್ತಿದೆ “ ಎಂದು ವ್ಯಂಗ್ಯವಾಡಿದ್ದಾರೆ. ಎರಡನೇಯ ಟ್ವೀಟಿನಲ್ಲಿ ‘ದಾಳಿಯ ವೇಳೆ ₹5 ಕೋಟಿ ಮೊತ್ತದ ಎನ್ನಲಾದ ರಶೀದಿಯ ಕುರಿತಾಗಿ ಉಲ್ಲೇಖಿಸಿದ್ದಾರೆ. ಆದರೆ, ನಾನು ಈ ಹಣದ ಬಗ್ಗೆ ಮೊದಲೇ ನಿರಾಕರಿಸಿದ್ದೇನೆ” ಎಂದಿದ್ದಾರೆ. ಮೂರನೇ ಟ್ವೀಟ್ ನಲ್ಲಿ ‘ಗೌರವಾನ್ವಿತ ಹಣಕಾಸು ಸಚಿವರು 2013ರಲ್ಲಿ ಕೂಡಾ ನನ್ನ ಮೇಲೆ ಇದೇ ರೀತಿ ದಾಳಿ ನಡೆದಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಇನ್ನು ಮುಂದೆ ಬಹಳ ಅಗ್ಗವಾಗುವುದಿಲ್ಲ. (ನಾಟ್‌ ಸಸ್ತಿ ಎನಿ ಮೋರ್‌)’ ಎಂದು ತಾಪ್ಸಿ ಟ್ವೀಟ್ ಮಾಡಿದ್ದಾರೆ.

- Advertisement -

ಎರಡು ದಿನಗಳ ಹಿಂದೆಯಷ್ಟೇ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸೀ ಪನ್ನು ಅವರ ಆಸ್ತಿಗಳ ಮೇಲೆ ಐಟಿ ದಾಳಿ ನಡೆದಿದ್ದು ಇಬ್ಬರೂ ತೆರಿಗೆ ವಂಚನೆ ಆರೋಪ ಎದುರಿಸುತ್ತಿದ್ದಾರೆ

- Advertisement -