ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ನಾಳೆಯಿಂದ ಮೂರು ದಿನ ದ.ಕ. ಜಿಲ್ಲಾದ್ಯಂತ ಪ್ರತಿಭಟನೆ: ಎಸ್ ಡಿಪಿಐ

Prasthutha|

ಮಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಕೇಂದ್ರ, ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಯನ್ನು ವಿರೋಧಿ ನಾಳೆಯಿಂದ ಮೂರು ದಿನಗಳ ಕಾಲ ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು SDPI ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ತಿಳಿಸಿದ್ದಾರೆ.

- Advertisement -

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅವೈಜ್ಞಾನಿಕ ನೀತಿಯಿಂದ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ನಿರಂತರ ಬೆಲೆಯೇರಿಕೆಯಿಂದ ಸಮಾಜದ ಎಲ್ಲಾ ವರ್ಗದ ಜನರು ಕಂಗೆಟ್ಟಿದ್ದು ಬದುಕು ದುಬಾರಿ ಆಗುತ್ತಿದೆ. ಕೊರೋನಾ ನಂತರ ಆರ್ಥಿಕ ಹೊಡೆತಕ್ಕೆ ಜನಸಾಮಾನ್ಯರು ಬಲಿಯಾಗಿದ್ದು, ಇದೀಗ ದಿನನಿತ್ಯ ಉಪಯೋಗಿಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದನ್ನು ನಿಯಂತ್ರಿಸಬೇಕಾದ ಸರಕಾರಗಳು ನೈಜ ಘಟನೆಯನ್ನು ಮರೆಮಾಚಿ ಕೋಮು ಧ್ರುವೀಕರಣದ ಮೂಲಕ ಜನರನ್ನು ಧರ್ಮ, ಜಾತಿಯ ಹೆಸರಲ್ಲಿ ಪ್ರಚೋದಿಸಿ ಅನಗತ್ಯ ವಿಚಾರಗಳ ಮೂಲಕ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ.  ಇದರ ವಿರುದ್ಧ SDPI ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ. ಅದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ರಿಂದ 14 ರ ವರೆಗೆ ಮೂರು ದಿನಗಳ ಕಾಲ ಗ್ರಾಮ ಮಟ್ಟದಿಂದ ತಾಲೂಕು ಮಟ್ಟದ ವರೆಗೆ ವಿನೂತನ ರೀತಿಯ ಪ್ರತಿಭಟನೆಗಳು ನಡೆಯಲಿವೆ ಎಂದು ಅಕ್ಬರ್ ಬೆಳ್ತಂಗಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Join Whatsapp