ಪ್ರಜ್ವಲ್ ಕಳಂಕ ತೊಳೆದುಕೊಳ್ಳುವವರೆಗೂ ಹೆಚ್ ಡಿಡಿ ಕುಟುಂಬದವರು ರಾಜೀನಾಮೆ ಕೊಡಲಿ: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಮಾಜಿ ಪ್ರಧಾನಿಗಳ ಕುಟುಂಬಕ್ಕೆ ಮೇಲೆ ಪ್ರಜ್ವಲ್ ರೇವಣ್ಣ ಕಳಂಕ ತಂದಿದ್ದಾರೆ. ಈ ಕಳಂಕ ತೊಳೆದುಕೊಳ್ಳುವವರೆಗೂ ದೇವೇಗೌಡರ ಕುಟುಂಬದವರು ರಾಜೀನಾಮೆ ಕೊಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

- Advertisement -


ಈ ಕುಟುಂಬದಲ್ಲೇ ಮೇಲ್ಮನೆ, ಕೆಳಮನೆ, ರಾಜ್ಯಸಭೆ ಸದಸ್ಯರಿದ್ದಾರೆ. ಈ ಕಳಂಕ ಅಳಿಸುವವರೆಗೂ ರಾಜೀನಾಮೆ ಕೊಡುತ್ತೇವೆ ಎಂದು ಯಾಕೆ ಅವರು ಹೇಳುತ್ತಿಲ್ಲ? ಪ್ರಜ್ವಲ್ ಜರ್ಮನಿಗೆ ಹೋಗಿದ್ದಾರೆ. ವಿಚಾರಣೆಗೆ ಕರೆದಾಗ ಬರುತ್ತಾರೆ ಎಂದಿದ್ದರು. ಈಗ ಪ್ರಜ್ವಲ್ ಎಲ್ಲಿದ್ದಾನೆ ಅಂತ ಗೊತ್ತಿಲ್ಲ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು.


ಜೆಡಿಎಸ್ ನಾಯಕರು ಪ್ರಜ್ವಲ್ ಯಾಕೆ ಹೀಗೆ ಮಾಡಿದ ಎಂದು ಹೇಳುತ್ತಿಲ್ಲ. ನಮ್ಮ ಮನೆ ಮಗ ತಪ್ಪು ಮಾಡಿದ್ದಾನೆ. ನಮ್ಮ ಕುಟುಂಬದ ಮೇಲೆ ಈ ಕಳಂಕ ಇದೆ. ಮನೆ ಮಗನಿಗೆ ಏನೂ ಆಗಬಾರದು, ಕುಟುಂಬದ ಪ್ರಖ್ಯಾತಿಯ ಬಗ್ಗೆ ಮಾತ್ರ ಅವರಿಗೆ ಕಾಳಜಿ. ಪ್ರಜ್ವಲ್ ಗೆ ಮಾನಸಿಕ ರೋಗ ಇತ್ತು. ಅದಕ್ಕೆ ಚಿಕಿತ್ಸೆ ಕೊಡಿಸುತ್ತೇವೆ ಎಂದು ಅವರ ಮನೆಯವರು ಹೇಳಿದ್ದಾರಾ ಎಂದು ಪ್ರಶ್ನಿಸಿದರು.

Join Whatsapp