ಸಂತೋಷ್ ಸಾವಿಗೆ ಈಶ್ವರಪ್ಪ ನೇರ ಹೊಣೆ: ಅಣ್ಣ ಪ್ರಶಾಂತ್ ಪಾಟೀಲ್

Prasthutha|

►►’ಈಶ್ವರಪ್ಪನನ್ನು ಬಂಧಿಸುವವರೆಗೂ ನಾವು ಅಂತ್ಯಕ್ರಿಯೆ ನಡೆಸುವುದಿಲ್ಲ’

- Advertisement -

ಬೆಳಗಾವಿ: ನನ್ನ ತಮ್ಮ ಸಂತೋಷ್ ಪಾಟೀಲ್ ಸಾವಿಗೆ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ನೇರ ಹೊಣೆ ಎಂದು ಪ್ರಶಾಂತ್ ಪಾಟೀಲ್ ಆರೋಪಿಸಿದ್ದಾರೆ.

ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ಸಹೋದರ ಸಂತೋಷ್ ಪಾಟೀಲ್ ಹಿಂದಿನಿಂದಲೂ ಗುತ್ತಿಗೆ ಮಾಡುತ್ತಿದ್ದ. 4 ಕೋಟಿ ರೂ. ಮೊತ್ತದ ಕೆಲಸ ಮಾಡಿದ್ದೇನೆ. ಹಣ ಬಂದಿಲ್ಲ, ಬಹಳ ಕಷ್ಟವಾಗಿದೆ ಎಂದು ಹೇಳಿದ್ದ. ಅವರ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ನಮ್ಮ ಸಮುದಾಯದವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು‌ ಹೇಳಿದ್ದಾರೆ.

- Advertisement -

‘ಈಶ್ವರಪ್ಪ ಅವರನ್ನು ಬಂಧಿಸುವವರೆಗೂ ನಾವು ಅಂತ್ಯಕ್ರಿಯೆ ನಡೆಸುವುದಿಲ್ಲ’ ಎಂದು ಹೇಳಿದರು.

Join Whatsapp