ತಿರುಪತಿ ಲೋಕಸಭಾ ಉಪಚುನಾವಣೆ | ವೈಎಸ್ ಆರ್ ಕಾಂಗ್ರೆಸ್ ಮುನ್ನಡೆ!

Prasthutha|

ತಿರುಪತಿ: ತಿರುಪತಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಸುತ್ತಿನ ನಂತರ ಆಡಳಿತಾರೂಢ ವೈ ಎಸ್ ಆರ್ ಕಾಂಗ್ರೆಸ್ ಪಕ್ಷ 14 ಸಾವಿರದಿಂದ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದೆ.

- Advertisement -

ಚುನಾವಣಾ ಆಯೋಗದ ಪ್ರಕಾರ, ಮೊದಲ ಸುತ್ತಿನಲ್ಲಿ ವೈಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿ ಎಂ.ಗುರುಮೂರ್ತಿ 28,547 ಮತಗಳನ್ನು ಪಡೆದರೆ, ಟಿಡಿಪಿಯ ಪನಾಬಾಕ ಲಕ್ಷ್ಮಿ 14,451 ಮತಗಳನ್ನು ಪಡೆದುಕೊಂಡಿದ್ದಾರೆ. ತಿರುಪತಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಏಪ್ರಿಲ್ 17 ರಂದು ನಡೆದಿತ್ತು.

Join Whatsapp