ರಾಯಚೂರು: ಆಟೋ ಚಾಲಕನನ್ನು ಚಾಕುವಿನಿಂದ ಇರಿದು ವ್ಯಕ್ತಿಯೋರ್ವ ಕೊಲೆಗೈದಿರುವ ಭೀಕರ ಘಟನೆ ಜಿಲ್ಲೆಯ ತೀನ್ ಕಂದಿಲ್ ವೃತ್ತದ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು 28 ವರ್ಷದ ಸಮೀರ್ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಅಮನ್ ಎಂದು ಗುರುತಿಸಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಹಳೆ ವೈಷಮ್ಯ ಹಿನ್ನೆಲೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಚಾಕು ಇರಿದಿರುವುದಾಗಿ ತಿಳಿದು ಬಂದಿದ್ದು, ಆರೋಪಿ ಆಟೋ ಚಾಲಕನೊಂದಿಗೆ ಜಗಳ ಮಾಡಿ ಮನಬಂದಂತೆ ಚಾಕುವಿನಿಂದ ಇರಿದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಟೋದಲ್ಲಿ ಪರಾರಿಯಾಗಿದ್ದ ಆರೋಪಿ ಅಮನ್ ನನ್ನು ಪೊಲೀಸರು ಬಂಧಿಸಿದ್ದಾರೆ.