ಕಾಂಗ್ರೆಸ್ ಮಾಡಿದ ಪಾಪದ ಸಾಲ ತೀರಿಸಲು ಬೆಲೆ ಏರಿಕೆ : ಸಿ.ಟಿ. ರವಿ

Prasthutha|

ಬೆಂಗಳೂರು: ಕಾಂಗ್ರೆಸ್ ಮಾಡಿದ ಪಾಪದ ಸಾಲ ತೀರಿಸಲು ಬೆಲೆ ಏರಿಕೆಯಾಗುತ್ತಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ.


ಈ ಬಗ್ಗೆ ಮಾತನಾಡಿದ ಅವರು, ಬೆಲೆ ಏರಿಕೆ ಭಾರತದಲ್ಲಿ ಮಾತ್ರವಲ್ಲ. ಜಾಗತಿಕ ಮಟ್ಟದಲ್ಲಿ ಏರಿಕೆಯಾಗಿದೆ. ಸಂಕಷ್ಟದ ಕಾರಣದಿಂದಾಗಿ ಈಗ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆ ನಿಗದಿತ ಸಮಯಕ್ಕೆ ಮಾತ್ರ ಆಗಿರುತ್ತದೆ. ದೇಶದ ಭವಿಷ್ಯದ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

- Advertisement -


ಬೆಲೆ ಏರಿಕೆಯ ಬಗ್ಗೆ ಕಾಂಗ್ರೆಸ್ ನವರಿಗೆ ಪ್ರತಿಭಟನೆ ಮಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ ನವರು ದಿನಾ ಎತ್ತಿನ ಗಾಡಿಯಲ್ಲಿ ಬರುತ್ತಾರೋ ಅಥವಾ ಒಂದು ದಿನ ಶೋ ಕೊಡಲು ಮಾತ್ರ ಬಂದಿದ್ದಾರಾ ಎಂದು ಎಂದು ಪ್ರಶ್ನಿಸಿದ್ದಾರೆ.

- Advertisement -