ರಾಷ್ಟ್ರೀಯ ಮಟ್ಟದ ಶೂಟರ್ ನಮನ್‌ವೀರ್ ಸಿಂಗ್ ಆತ್ಮಹತ್ಯೆ!

Prasthutha|

ಚಂಡೀಗರ್: ರಾಷ್ಟ್ರೀಯ ಮಟ್ಟದ ಶೂಟರ್ ಕ್ರೀಡಾಪಟು ನಮನ್‌ವೀರ್ ಸಿಂಗ್ ಬ್ರಾರ್ (28) ಅವರು ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಮೋಹಾಲಿಯ ಸೆಕ್ಟರ್ ಮನೆಯಲ್ಲಿ ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತಿಳಿದು ಬಂದಿದ್ದು, ಆಕಷ್ಮಿಕವಾಗಿ ಗುಂಡು ಸಿಡಿದಿದೆಯಾ ಎಂಬುದನ್ನೂ ತನಿಖೆ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಸ್ಪಷ್ಟ ಮಾಹಿತಿ ದೊರೆಯಲಿದೆ’ ಎಂದು ಮೋಹಾಲಿ ಡಿಎಸ್‌ಪಿ ಗುರ್‌ಶೇರ್ ಸಿಂಗ್ ಸಂಧು ತಿಳಿಸಿದ್ದಾರೆ.

- Advertisement -

ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಜಾಗತಿಕ ವಿಶ್ವವಿದ್ಯಾಲಯಗಳ ಡಬಲ್‌ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ನಮನ್‌ವೀರ್‌ ಕಂಚಿನ ಪದಕ ಗೆದ್ದಿದ್ದರು. ಐಎಸ್‌ಎಸ್‌ಎಫ್‌ ಅರ್ಹತಾ ಪರೀಕ್ಷೆಯಲ್ಲೂ ಅವರು ಭಾಗವಹಿಸಿದ್ದರು. ಇಂತಹ ಪ್ರತಿಭಾವಂತ ದುರಂತ ಸಾವು ಕಂಡದ್ದು ಹೆತ್ತವರಿಗೆ ಸಹಿಸಲು ಆಗದೇ ರೋದಿಸುವ ದೃಶ್ಯ ಹೃದಯವಿದ್ರಾವಕವಾಗಿದೆ.

- Advertisement -