ಅಗ್ನಿ ಅವಘಡ| 4 ಅಂತಸ್ತಿನ ಹಾಸ್ಟೆಲ್ ಕಟ್ಟಡದಲ್ಲಿದ್ದ 10 ಮಂದಿ ಸಜೀವ ದಹನ

Prasthutha|

ವೆಲ್ಲಿಂಗ್ಟನ್: ಅಗ್ನಿ ದುರಂತ ಸಂಭವಿಸಿ 4 ಅಂತಸ್ತಿನ ಹಾಸ್ಟೆಲ್ ಕಟ್ಟಡದಲ್ಲಿದ್ದ 10 ಮಂದಿ ಸಜೀವ ದಹನವಾಗಿರುವ ದಾರುಣ ಘಟನೆ ನ್ಯೂಜಿಲೆಂಡ್​ನ ವೆಲ್ಲಿಂಗ್ಟನ್​​ ನಗರದಲ್ಲಿ ನಡೆದಿದೆ.

- Advertisement -

ಲೋಫರ್ಸ್ ಲಾಡ್ಜ್ ಹಾಸ್ಟೆಲ್‌ ಎಂಬ ನಾಲ್ಕು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ತಡರಾತ್ರಿ 12:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.


ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದು, ಸುಮಾರು 20 ಜನರು ನಾಪತ್ತೆಯಾಗಿದ್ದಾರೆ ಎಂದು ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ.

- Advertisement -

ಅವಘಡ ಸಂಭವಿಸಿದ ಕಟ್ಟಡದಿಂದ ಐವತ್ತೆರಡು ಜನರನ್ನು ರಕ್ಷಿಸಲಾಗಿದ್ದು ಅಗ್ನಿಶಾಮಕ ದಳದವರು ನಾಪತ್ತೆಯಾಗಿರುವ ಇನ್ನೂ ಇತರರಿಗಾಗಿ ಹುಡುಕುತ್ತಿದ್ದಾರೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಯ ವೆಲ್ಲಿಂಗ್ಟನ್ ಜಿಲ್ಲಾ ವ್ಯವಸ್ಥಾಪಕ ನಿಕ್ ಪ್ಯಾಟ್ ತಿಳಿಸಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Join Whatsapp