IPL 2023: ಫುಟ್ಬಾಲ್ ತಂಡದ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವ ಲಕ್ನೋ ಸೂಪರ್ ಜೈಂಟ್ಸ್| ಯಾಕೆ ಗೊತ್ತಾ?

Prasthutha|

ಕೋಲ್ಕತ್ತಾ: ಐಪಿಎಲ್ ನ 68ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ವಿಭಿನ್ನ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

- Advertisement -

ಕೆಕೆಆರ್ ತಂಡದ ತವರು ನೆಲ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿರುವುದರಿಂದ ಲಕ್ನೋಗಿಂತ ಕೆಕೆಆರ್ ತಂಡಕ್ಕೆ ಹೆಚ್ಚಿನ ಪ್ರೇಕ್ಷಕರ ಬೆಂಬಲ ದೊರೆಯಲಿದೆ. ಆದರೆ ಈ ಬೆಂಬಲಕ್ಕೆ ಮಾಸ್ಟರ್ ಸ್ಟ್ರೋಕ್ ನೀಡಲು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಿರ್ಧರಿಸಿದ್ದಾರೆ.

ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇ ಜೆರ್ಸಿ ಬದಲಾವಣೆ. ಅಂದರೆ ಪಶ್ಚಿಮ ಬಂಗಾಳದ ಜನರು ಕ್ರಿಕೆಟ್ ಅನ್ನು ಎಷ್ಟು ಪ್ರೀತಿಸುತ್ತಾರೋ, ಅಷ್ಟೇ ಫುಟ್ಬಾಲ್ ಅನ್ನು ಪ್ರೀತಿಸುತ್ತಾರೆ. ಅದರಲ್ಲೂ ಬಂಗಾಳದ ಪ್ರತಷ್ಠಿತ ಫುಟ್ಬಾಲ್ ಕ್ಲಬ್ ATK ಮೋಹನ್ ಬಗಾನ್ ಗೆ ಅಪಾರ ಅಭಿಮಾನಿಗಳಿದ್ದಾರೆ.

- Advertisement -

ಸಂಜೀವ್ ಗೋಯೆಂಕಾ ಅವರು ಮೋಹನ್ ಬಗಾನ್ ಕ್ಲಬ್ ನ ಮಾಲೀಕರಾಗಿದ್ದಾರೆ.  ಇಂಡಿಯನ್ ಸೂಪರ್ ಲೀಗ್ (ಫುಟ್ಬಾಲ್) ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಗೋಯೆಂಕಾ ತಂಡಗಳನ್ನು ಹೊಂದಿದ್ದು, ಇದೀಗ ಇದನ್ನೇ ಮಾಸ್ಟರ್ ಸ್ಟ್ರೋಕ್ ಆಗಿ ಬಳಸಿ ಕೊಲ್ಕತ್ತಾ ಅಭಿಮಾನಿಗಳ ಮನಗೆಲ್ಲಲು ಪ್ಲ್ಯಾನ್ ರೂಪಿಸಿದ್ದಾರೆ.

ಅದರಂತೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಆಟಗಾರರು ಮೋಹನ್ ಬಗಾನ್ ತಂಡದ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಪ್ರಸ್ತುತ ಇರುವ ಗಾಢ ನೀಲಿ ಜೆರ್ಸಿ ಬದಲಿಗೆ, ಹಸಿರು ಮತ್ತು ಮರೂನ್ ಬಣ್ಣಗಳ ಜೆರ್ಸಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕಣಕ್ಕಿಳಿಯಲಿದೆ.

ಈ ಮೂಲಕ ಸಂಜೀವ್ ಗೋಯೆಂಕಾ ಅವರು ಮೋಹನ್ ಬಗಾನ್ ಅಭಿಮಾನಿಗಳನ್ನು ಲಕ್ನೋ ಸೂಪರ್ ಜೈಂಟ್ಸ್’ನತ್ತ ಸೆಳೆಯುವ ಪ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗಿದೆ.  

Join Whatsapp