ತನಿಶ್ಕ್ ಬ್ರಾಂಡ್ ವಿರುದ್ಧ ಮುಂದುವರಿದ ಟ್ವಿಟ್ಟರ್ ದಾಳಿ: ಬ್ರಾಂಡ್ ಮ್ಯಾನೇಜರ್ ಮನ್ಸೂರ್ ಅಲಿ ವಜಾಕ್ಕೆ ಆಗ್ರಹಿಸಿದ ಹಿಂದುತ್ವ ಟ್ರೋಲ್ ಬ್ರಿಗೇಡ್

Prasthutha: October 19, 2020

► ಟ್ರೆಂಡಿಂಗ್ ನಲ್ಲಿ #TataSackMansoorAli

► 41 ಸಾವಿರಕ್ಕೂ ಅಧಿಕ ಟ್ವೀಟ್

► ಟ್ವಿಟ್ಟರ್ ಅಕೌಂಟ್ ಡಿಲೀಟ್ ಮಾಡಿದ ಮನ್ಸೂರ್ ಅಲಿ

ಹೊಸದಿಲ್ಲಿ: ನಿರಂತರ ಟ್ರೋಲ್ ಗಳೊಂದಿಗೆ ಕೋಮು ಸೌಹಾರ್ದತೆಯನ್ನುಬಿಂಬಿಸುವ ತನಿಶ್ಕ್ ಜಾಹಿರಾತನ್ನು ಹಿಂದೆಗೆಯುವಂತೆ ಮಾಡಿದ ಹಿಂದುತ್ವ ಟ್ರೋಲ್ ಬ್ರಿಗೇಡ್, ಬ್ರಾಂಡ್ ನ ವಿರುದ್ಧ ತನ್ನ ಟ್ವಿಟ್ಟರ್ ಯುದ್ಧವನ್ನು ಮುಂದುವರಿಸಿದೆ. ಈ ಬಾರಿ ಗುರಿ ಪಡಿಸಲಾಗಿರುವುದು ತನಿಶ್ಕ್ ಬ್ರಾಂಡ್ ಮ್ಯಾನೇಜರ್ ಮನ್ಸೂರ್ ಅಲಿಯವರನ್ನು. ಮನ್ಸೂರ್ ಅಲಿಯನ್ನು ಕಂಪೆನಿಯಿಂದ ಉಚ್ಛಾಟಿಸಬೇಕೆಂದು ಆಗ್ರಹಿಸಿ  ಟ್ವೀಟ್ ಗಳನ್ನು ಹರಿಸಲಾಗಿದೆ.

#TataSackMansoorAli ಇಂದಿನ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿ ಮೂರನೆ ಸ್ಥಾನವನ್ನು ಪಡೆದಿತ್ತು. 41 ಸಾವಿರಕ್ಕೂ ಅಧಿಕ ಮಂದಿ ಈ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿದ್ದರು. ಮಾತ್ರವಲ್ಲದೆ ನಿರಂತರ ನಿಂದನಾತ್ಮಕ ಸಂದೇಶಗಳು ಮತ್ತು ಬೆದರಿಕೆಗಳ ಕಾರಣದಿಂದಾಗಿ ಅಂತಿಮವಾಗಿ ಮನ್ಸೂರ್ ಅಲಿ ಇಂದು ತನ್ನ ಟ್ವಿಟ್ಟರ್ ಅಕೌಂಟನ್ನೇ ಡಿಲೀಟ್ ಮಾಡಬೇಕಾಗಿ ಬಂದಿದೆ ಎಂದು ಟಿವಿ-9 ಹಿಂದಿ ವರದಿ ಮಾಡಿದೆ.

ಈ ಹಿಂದೆ ಲವ್ ಜಿಹಾದ್ ಆಯಾಮದಲ್ಲಿ ಸಾಗುತ್ತಿದ್ದ ಹಿಂದುತ್ವ ಟ್ರೋಲರ್ ಗಳು ಬ್ರಾಂಡ್ ಮ್ಯಾನೇಜರ್ ಮನ್ಸೂರ್ ಅಲಿಯ ಹೆಸರು ಧರ್ಮದೊಂದಿಗೆ ಸೇರಿರುವುದರಿಂದಾಗಿ ಈ ವಿವಾದವನ್ನು ಹಿಂದೂ-ಮುಸ್ಲಿಮ್ ಆಯಾಮದೆಡೆಗೆ ತಿರುಗಿಸಿದೆ.

ಈ ಹಿಂದೆ ತಮ್ಮ ಹಿಂದೂ ಸೊಸೆಯ ಸೀಮಂತಕ್ಕೆ ತಯಾರಿ ಮಾಡುತ್ತಿದ್ದ ಮುಸ್ಲಿಂ ಕುಟುಂಬವನ್ನು ತೋರಿಸುವ ಜಾಹೀರಾತನ್ನು ಪ್ರಸಾರ ಮಾಡಿದ್ದಕ್ಕಾಗಿ ಹಿಂದುತ್ವ ಟ್ರೋಲ್ ಬ್ರಿಗೇಡ್ ಟಾಟಾ ಗ್ರೂಪ್ ನ ‘ದಿ ಟೈಟಾನ್’ ಕಂಪೆನಿಯ ತನಿಶ್ಕ್ ಬ್ರಾಂಡನ್ನು ಬಹಿಷ್ಕರಿಸುವಂತೆ ಕೋರಿ ಟ್ವೀಟ್ ಗಳನ್ನು ಮಾಡಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ