October 19, 2020
ಗಡಿ ಉದ್ವಿಗ್ನತೆಯ ಮಧ್ಯೆಯೇ ಲಡಾಖ್ ನಲ್ಲಿ ಚೀನಾ ಸೈನಿಕನನ್ನು ಸೆರೆ ಹಿಡಿದ ಭಾರತದ ಪಡೆ

ಭಾರತ ಚೀನಾ ಗಡಿ ವಿವಾದ ತಾರಕಕ್ಕೇರಿರುವ ಮಧ್ಯೆಯೇ ಲಡಾಖ್ ನ ಡೆಮ್ಚೊಕ್ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ ಎ) ಯ ಚೀನಾ ಸೈನಿಕನೋರ್ವನನ್ನು ಸೆರೆ ಹಿಡಿಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ ಭಾರತ – ಚೀನಾ ಗಡಿ ಉದ್ವಿಗ್ನತೆ ಹೆಚ್ಚಿನ ಪ್ರಮಾನದಲ್ಲಿದೆ
ಸೆರೆ ಹಿಡಿದ ಚೀನಾ ಸೈನಿಕನನ್ನು ಭಾರತೀಯ ಪಡೆ ಬಂಧಿಸಿ ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದು, ಆತ ಚೀನಾದ 6ನೇ ಮೋಟಾರ್ ಸೈಜ್ ಇನ್ಫೆಂಟ್ರಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ ಎಂಬ ಮಾಹಿತಿ ದೊರಕಿದೆ. ಆತ ನಾಗರಿಕ ಮತ್ತು ಮಿಲಿಟರಿ ದಾಖಲೆಗಳನ್ನು ಹೊಂದಿದ್ದಎಂದು ಸೇನಾ ಮೂಲಗಳು ತಿಳಿಸಿವೆ.
ಕಳೆದು ಹೋಗಿರುವ ತನ್ನ ಚಮರೀಮೃಗ (ಪ್ರದೇಶದ ಕಾಡೆತ್ತು) ವನ್ನು ಹುಡುಕುತ್ತಾ ತಾನು ತಾನು ಭಾರತ ಪ್ರವೇಶಿಸಿರುವುದಾಗಿ ಆತ ಹೇಳಿಕೊಂಡಿದ್ದು, ಆತನ ಬಳಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ ಎಂದು ಮೂಲಗಳು ತಿಳಿಸಿವೆ. “ಒಂದು ವೇಳೆ ಆತ ಯಾವುದೇ ದುರುದ್ದೇಶವಿಲ್ಲದೆ ಆಕಸ್ಮಿಕವಾಗಿ ಭಾರತ ಪ್ರವೇಶಿಸಿದ್ದರೆ, ಅಂತಾರಾಷ್ಟ್ರೀಯ ಶಿಷ್ಟಾಚಾರದ ಪ್ರಕಾರ ಅವರನ್ನು ಚೀನೀಯರಿಗೆ ಹಿಂದಿರುಗಿಸಲಾಗುವುದು” ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ