ಕುರ್’ಆನಿನ ಕೆಲವು ಸೂಕ್ತಗಳನ್ನು ಅಳಿಸಿ ಹಾಕುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಮ್ ಕೋರ್ಟ್ !

Prasthutha|

►ಅರ್ಜಿದಾರ ವಸೀಮ್ ರಿಝ್ವಿಗೆ 50,000 ದಂಡ ವಿಧಿಸಿದ ಸುಪ್ರೀಮ್ !
►ಉ. ಪ್ರ ಶಿಯಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ರಿಝ್ವಿ !

ದೆಹಲಿ : ದೇಶದ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಇಸ್ಲಾಮಿನ ಪವಿತ್ರ ಗ್ರಂಥವಾಗಿರುವ ಕುರ್’ಆನಿನ ಕೆಲವೊಂದು ಸೂಕ್ತಗಳನ್ನು ತೆಗೆದು ಹಾಕಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ಇಂದು ವಜಾಗೊಳಿಸಿದೆ.  ಉತ್ತರ ಪ್ರದೇಶದ ವಕ್ಫ್ ಶಿಯಾ ಸೆಂಟ್ರಲ್ ಬೋರ್ಡ್ ನ ಮಾಜಿ ಅಧ್ಯಕ್ಷರಾಗಿರುವ ಸೈಯದ್ ವಸೀಮ್ ರಿಝ್ವಿ  ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು. ಇದಕ್ಕೆ ದೇಶದಾದ್ಯಂತ ವ್ಯಾಪಕ ಆಕ್ರೊಶ ವ್ಯಕ್ತವಾಗಿತ್ತು.

- Advertisement -

ಇದೀಗ ಸುಪ್ರೀಮ್ ಕೋರ್ಟ್ ಅರ್ಜಿಯನ್ನು ತಳ್ಳಿ ಹಾಕಿದೆ ಮಾತ್ರವಲ್ಲ, ಅರ್ಜಿದಾರ ರಿಝ್ವಿಯವರಿಗೆ 50 ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ನ್ಯಾಯಮೂರ್ತಿಗಳಾದ ರೋಹಿಂಟನ್ ಫಾಲಿ ನಾರಿಮನ್, ಬಿ.ಆರ್. ಗವಾಯಿ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಪೀಠವು ಮಹತ್ವದ ತೀರ್ಪನ್ನು ನೀಡಿದೆ.

ಕುರಾನ್ ನಲ್ಲಿರುವ ಕೆಲವು ಸೂಕ್ತಗಳು ದೇಶದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಬೆದರಿಕೆಯಾಗಿದೆ ಎಂದು ರಿಝ್ವಿ ತಮ್ಮ ಮನವಿಯಲ್ಲಿ ಆರೋಪಿಸಿದ್ದರು. ಆ ಸೂಕ್ತಗಳನ್ನು ಅಸಂವಿಧಾನಿಕ, ಪರಿಣಾಮಕಾರಿಯಲ್ಲದ ಮತ್ತು ಕ್ರಿಯಾತ್ಮಕವಲ್ಲ ಎಂದು ಘೋಷಿಸುವಂತೆ ಅವರು ನ್ಯಾಯಾಲಯವನ್ನು ಕೋರಿದ್ದರು.

- Advertisement -