ಫ್ರಾನ್ಸ್ ಮಸೀದಿ ಗೋಡೆಯಲ್ಲಿ ಇಸ್ಲಾಂ ವಿರೋಧಿ ಬರಹ, ಚಿತ್ರ ಪ್ರತ್ಯಕ್ಷ ! ಎರಡು ಮಸೀದಿಗಳ ಮೇಲೆ ಕಚ್ಚಾ ಬಾಂಬ್ ದಾಳಿ !

Prasthutha|

►‘ಶಿಲುಬೆ ಯುದ್ಧ’ ಪ್ರಾರಂಭವಾಗಲಿದೆ ಎಂಬ ಬರಹ !

- Advertisement -

ಪ್ಯಾರಿಸ್ : ಪಶ್ಚಿಮ ಫ್ರಾನ್ಸಿನ ಮಸೀದ್ಯೊಂದರ ಹೊರ ಗೋಡೆಯಲ್ಲಿ ಶಾಂತಿಭಂಜಕ ದುಷ್ಕರ್ಮಿಗಳು ಇಸ್ಲಾಂ ವಿರೋಧಿ ಬರಹ ಹಾಗೂ ಚಿತ್ರಗಳನ್ನು ರಚಿಸಿದ್ದಾರೆ. ಈ ಘಟನೆಯನ್ನು ಫ್ರಾನ್ಸಿನ ಆಂತರಿಕ ಸಚಿವ ಜೆರಾಲ್ಡ್ ಡಮೇನಿನ್ ಖಚಿತಪಡಿಸಿದ್ದು, ಈ ರೀತಿಯ ಪ್ರತಿಯೊಂದು ಘಟನೆಗಳನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ಪಶ್ಚಿಮ ಫ್ರಾನ್ಸಿನ ಅವಿಸೆನ್ನಾ ಮಸೀದಿ ಹಾಗೂ ರೆನ್ನೇಸ್ ನಲ್ಲಿರುವ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ನ ಗೋಡೆಗಳಲ್ಲಿ ಇಸ್ಲಾಂ ವಿರೋಧಿ ಬರಹ ಹಾಗೂ ಚಿತ್ರಗಳನ್ನು ಬರೆಯಲಾಗಿದೆ. ಪಾಲಿಕೆ ಸಿಬ್ಬಂದಿಗಳು ಕೂಡಲೇ ಅದನ್ನು ಅಳಿಸಿ ಹಾಕಿದ್ದಾರೆ. ಇದು ಫ್ರಾನ್ಸಿನಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾದ ಕುರುಹಾಗಿದೆ ಎಂದು ಪ್ರಾಂತ್ಯದ ಮುಸ್ಲಿಮರ ನಾಯಕರಾಗಿರುವ ಮುಹಮ್ಮದ್ ಝೈದೌನಿ ತನ್ನ ಖಂಡನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಂದು ಮಸೀದಿಯಲ್ಲಿ ಬರೆದ ಬರಹಗಳು, “ಶಿಲುಬೆ ಯುದ್ಧ ಪ್ರಾರಂಭವಾಗಲಿದೆ” ಎಂದು ಬರೆಯಲಾಗಿದೆ.

- Advertisement -

ಎರಡು ಮಸೀದಿಗಳ ಮೇಲೆ ಕಚ್ಚಾ ಬಾಂಬ್ ದಾಳಿ

ಈ ಘಟನೆಗಳಲ್ಲದೇ ರಮಝಾನ್ ಪ್ರಾರಂಭವಾಗುವ ಕೆಲವೇ ದಿನಗಳಿರುವಾಗ ಫ್ರಾನ್ಸಿನಲ್ಲಿ ಮಸೀದಿಗಳ ಮೇಲಿನ ದಾಳಿ ಕೂಡಾ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಪತ್ರಕರ್ತ ಹಾಗೂ ಇಸ್ಲಾಮೋಫೋಬಿಯಾದ ಬಗ್ಗೆ ಹೆಚ್ಚಾಗಿ ಬರೆಯುವ ಸಿ ಜೆ ವೆರ್ಲ್ ಮಾನ್ ಅವರು, “ಕಳೆದ 24 ಗಂಟೆಗಳ ಅವಧಿಯಲ್ಲಿ 2 ಮಸೀದಿಗಳ ಮೇಲೆ ಕಚ್ಚಾ ಬಾಂಬ್ ದಾಳಿ ಎಸೆದು ಬೆಂಕಿ ಹಾಕಲಾಗಿದೆ ಮತ್ತು ಧ್ವಂಸಗೈಯ್ಯಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

Join Whatsapp