ಗುಜರಾತ್’ನಲ್ಲಿ ಫ್ಯಾಶಿಸ್ಟರನ್ನು ಸೋಲಿಸಲು ನಮ್ಮನ್ನು ಬೆಂಬಲಿಸಿ: ಕಾಂಗ್ರೆಸ್ ಮುಖಂಡ ಜಿಗ್ನೇಶ್ ಮೇವಾನಿ

Prasthutha|

ಅಹಮದಾಬಾದ್: ಗುಜರಾತ್ ವಿಧಾನಸಭೆಗೂ ಮೊದಲು ಬೃಹತ್ ಸಾರ್ವಜನಿಕ ಅಭಿಯಾನವನ್ನು ಪ್ರಾರಂಭಿಸಿದ ದಲಿತ ಯುವ ಮುಖಂಡ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿಗ್ನೇಶ್ ಮೇವಾನಿ, ಗುಜರಾತ್’ನಲ್ಲಿ ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಲು ನೀವು ನನ್ನನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ವಡ್ಗಾಂವ್ ಶಾಸಕ, ಗುಜರಾತ್’ನಲ್ಲಿ ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಲು ನನಗೆ ನಿಮ್ಮ ಬೆಂಬಲ ಬೇಕು. ದಯವಿಟ್ಟು ನನ್ನ ಚುನಾವಣಾ ಪ್ರಚಾರಕ್ಕೆ ಉದಾರವಾಗಿ ದೇಣಿಗೆ ನೀಡಿ. ಹೋರಾಟ ನಡೆಸಿ ಗೆಲ್ಲೋಣ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಮುಂಬರುವ ಗುಜರಾತ್ ಚುನಾವಣೆಯಲ್ಲಿ ಗುಜರಾತ್’ನ ವಡ್ಗಾಂವ್ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.

- Advertisement -

ಮೇವಾನಿ ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಸುಮಾರು 40 ಲಕ್ಷ ರೂಪಾಯಿ ಸಂಗ್ರಹಿಸಲು ಯೋಜನೆ ಹಾಕಿದ್ದು, ಇದುವರೆಗೆ 8 ಲಕ್ಷಕ್ಕೂ ಹೆಚ್ಚು ಹಣವನ್ನು ಗಳಿಸಿದ್ದಾರೆ.

Join Whatsapp