ಚುನಾವಣಾ ಆಯುಕ್ತರ ನೇಮಕದ ಕಡತ ಮಿಂಚಿನ ವೇಗದಲ್ಲಿ ಸಂಚಾರ: ಸುಪ್ರೀಂಕೋರ್ಟ್ ಗರಂ

Prasthutha|

ನವದೆಹಲಿ: ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರಾಗಿ ನೇಮಕ ಮಾಡಲು ಮಿಂಚಿನ ವೇಗದಲ್ಲಿ ಕಡತ ಸಂಚಾರವಾಗಿ, ತರಾತುರಿಯ ನೇಮಕ ನಡೆದಿದೆ ಎಂಬುದಕ್ಕೆ ಕಾರಣವೇನು ಎಂದು ಸುಪ್ರೀಂ ಕೋರ್ಟ್ ಪೀಠವು ಚುನಾವಣಾ ಆಯೋಗದ ವಿಚಾರಣೆಯ ವೇಳೆ ಅಟಾರ್ನಿ ಜನರಲ್ ಅವರನ್ನು ಪ್ರಶ್ನಿಸಿದೆ.

- Advertisement -

“ನೀವು ಅದರ ಬಾಯಿ ಮುಚ್ಚಿಸಿರಿ. ಚುನಾವಣಾ ಆಯುಕ್ತರಾಗಿ ಅರುಣ್ ಗೋಯೆಲ್’ರ ನೇಮಕ ತರಾತುರಿಯಲ್ಲಿ ಆಗಿರುವ ವಿಷಯವನ್ನು ಅಮೂಲಾಗ್ರವಾಗಿ ವಿಚಾರಿಸಿರಿ.” ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದರು.

“ಇದು ಯಾವ ಬಗೆಯ ವಿಕಾಸ? ನಾವು ಅರುಣ್ ಗೋಯೆಲ್ ರ ಅರ್ಹತೆಯನ್ನು ಪ್ರಶ್ನಿಸುವುದಿಲ್ಲ. ಆದರೆ ನೇಮಕದ ಪ್ರಕ್ರಿಯೆಯು ಸರಿಯಲ್ಲ” ಎಂದು ಐವರು ಜಡ್ಜ್’ಗಳ ಸಂವಿಧಾನ ಪೀಠದ ಮುಖ್ಯಸ್ಥ ಜಸ್ಟಿಸ್ ಕೆ. ಎಂ. ಜೋಸೆಫ್ ಕೇಳಿದರು.

- Advertisement -

“ದಯವಿಟ್ಟು ಸದ್ಯಕ್ಕೆ ನೀವು ಈ ವಿಷಯದಲ್ಲಿ ಸುಮ್ಮನಿರಿ. ಈ ವಿಷಯವನ್ನು ಸಮಗ್ರವಾಗಿ ಪರಿಶೀಲಿಸುವಂತೆ ನಾನು ಮನವಿ ಮಾಡುತ್ತೇನೆ.” ಎಂದು ಅಟಾರ್ನಿ ಜನರಲ್ ಹೇಳಿದರು.

ಸರ್ವೋಚ್ಚ ನ್ಯಾಯಾಲಯವು ಬುಧವಾರ ಅರುಣ್ ಗೋಯೆಲ್ ನೇಮಕದ ಕಡತವನ್ನು ಪೀಠದೆದುರು ಇಡಲು ಆದೇಶ ನೀಡಿತ್ತು. ಅದರಂತೆ ಅದನ್ನು ಇಂದು ಐವರು ಜಡ್ಜ್’ಗಳ ಸಂವಿಧಾನಾತ್ಮಕ ಕೇಂದ್ರ ಸರಕಾರದ ಪರ ಪೀಠಕ್ಕೆ ಸಲ್ಲಿಸಲಾಯಿತು.

1985ರ ಐಎಎಸ್ ಅಧಿಕಾರಿಯಾದ ಅರುಣ್ ಗೋಯೆಲ್ ಒಂದೇ ದಿನದಲ್ಲಿ ಸ್ವಯಂ ನಿವೃತ್ತಿ ಪಡೆದರು. ಅವರ ಕಡತವು ಕೇಂದ್ರ ಸರಕಾರದ ಕಾನೂನು ಸಚಿವಾಲಯದಲ್ಲಿ ಒಂದೇ ದಿನದಲ್ಲಿ ವಿಲೇವಾರಿ ಆಗಿದೆ. ಒಟ್ಟು ನಾಲ್ಕು ಹೆಸರುಗಳನ್ನು ಪ್ರಧಾನ ಮಂತ್ರಿಗಳ ಎದುರು ಇಡಲಾಗಿತ್ತು. 24 ಗಂಟೆಗಳೊಳಗೆ ರಾಷ್ಟ್ರಪತಿಗಳು ಗೋಯೆಲ್ ನೇಮಕವನ್ನು ಮಾಡಿದ್ದಾರೆ!

ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಸುಪ್ರೀಂ ಕೋರ್ಟ್ ಮಾದರಿಯ ಕೊಲಿಜಿಯಂ ಬೇಕು ಎಂಬ ವಿಚಾರವಾಗಿ ಸದರಿ ಪೀಠವು ವಿಚಾರಣೆಗಳನ್ನು ಮುಂದುವರಿಸಿದೆ.

Join Whatsapp