ದುಬೈ: ಕೆ.ಎಸ್.ಸಿ.ಸಿ ವತಿಯಿಂದ ಚಿಣ್ಣರಿಗಾಗಿ ಬೇಸಿಗೆ ಶಿಬಿರ

Prasthutha|

ದುಬೈ ಜು.17: ಯುಎಇಯಲ್ಲಿ ದುಬೈ ಸರ್ಕಾರದ ಅಧೀನದಲ್ಲಿರುವ ಸಮುದಾಯ ಅಭಿವೃದ್ಧಿ ಪ್ರಾಧಿಕಾರದಲ್ಲಿ ನೋಂದಾಯಿತವಾದ ಕರ್ನಾಟಕ ಸ್ಫೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ -ಕೆಎಸ್ ಸಿಸಿ ವತಿಯಿಂದ 8 ರಿಂದ 15 ವರ್ಷದ ಮಕ್ಕಳಿಗಾಗಿ ಜುಲೈ 24, 2021 ರಿಂದ ಆಗಸ್ಟ್ 15, 2021 ರ ವರೆಗೆ ಕೆ ಎಸ್ ಸಿಸಿ ಕಿಡ್ಸ್ ಶೀರ್ಷಿಕೆಯಡಿಯಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.

- Advertisement -


ಪ್ರತಿ ಮಗು ಅನನ್ಯ ವ್ಯಕ್ತಿತ್ವವನ್ನು ಹೊಂದಿರುತ್ತದೆ. ಬೇಸಿಗೆ ಶಿಬಿರವು ಎಲ್ಲಾ ಮಕ್ಕಳಿಗೆ ಪ್ರಯೋಜನಕಾರಿಯಾಗಲಿದೆ. ಮಗುವಿನ ಆಸಕ್ತಿಗಳು ಏನೇ ಇರಲಿ, ಶಿಬಿರವು ಮಕ್ಕಳಿಗೆ ಪ್ರಮುಖವಾಗಿ ಸಾಮಾಜಿಕ, ಭಾವನಾತ್ಮಕ ಮತ್ತು ಅರಿವಿನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತ ಉತ್ತಮವಾಗಿ, ಮಕ್ಕಳು ಶಿಬಿರದಲ್ಲಿ ಜೀವಿತಾವಧಿಯಲ್ಲಿ ಉಳಿಯುವ ಸವಿ ನೆನಪುಗಳನ್ನು ನಿರ್ಮಿಸಲಿದ್ದಾರೆ.


ಈ ಕಾರ್ಯಕ್ರಮದ ಉದ್ದೇಶವು ಮಕ್ಕಳನ್ನು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಕಾರ್ಯಕ್ರಮದ ವಿವರಗಳನ್ನು ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್, ಟ್ವಿಟರ್ ಮತ್ತು ವಾಟ್ಸಾಪ್ ನ ಕೆ.ಎಸ್.ಸಿ.ಸಿ ಖಾತೆಗಳಲ್ಲಿ ಅಪ್ಲೋಡ್ ಮಾಡಲಾಗುತ್ತದೆ.

- Advertisement -

ಈ ಮೆಗಾ ಶಿಬಿರಕ್ಕೆ Bit.ly/KSCCkidssummercamp202 ಈ ಲಿಂಕ್ ಅಥವಾ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ ಉಚಿತವಾಗಿ ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ 971 55 450 5431, +971 56 539 7838 ಸಂಪರ್ಕಿಸಬಹುದು.

Join Whatsapp