ಸ್ವಾತಂತ್ರ್ಯ ಸಮಾರಂಭದಲ್ಲಿ ಭಾಗವಹಿಸಲು ಒಲಿಂಪಿಕ್ಸ್ ಕ್ರೀಡಾಳುಗಳಿಗೆ ವಿಶೇಷ ಆಹ್ವಾನ

Prasthutha|

ನವದೆಹಲಿ,ಆ.3; ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಿರುವವರನ್ನು ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸಲು ಸರ್ಕಾರ ಮುಂದಾಗಿದೆ.

- Advertisement -

ಒಲಿಂಪಿಕ್ಸ್ ತಂಡವನ್ನು ಸಂವಾದಕ್ಕಾಗಿ ತಮ್ಮ ನಿವಾಸಕ್ಕೂ ಪ್ರಧಾನಿಯವರು ಆಹ್ವಾನಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

120 ಅಥ್ಲೀಟ್ ಗಳೂ ಸೇರಿದಂತೆ ಒಟ್ಟು 228 ಮಂದಿ ಭಾರತದಿಂದ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದಾರೆ.

- Advertisement -

ಒಲಿಂಪಿಕ್ಸ್ ಗೆ ತೆರಳುವ ಮುನ್ನ ಅಥ್ಲೀಟ್ ಗಳ ಬಳಿ ಸಂವಾದ ನಡೆಸಿದ್ದರು.

“ಸೋಲು-ಗೆಲುವು ಜೀವನದ ಒಂದು ಭಾಗ. ನಮ್ಮ ಪುರುಷರ ಹಾಕಿ ತಂಡವು ಅತ್ಯುತ್ತಮವಾದ ಪ್ರದರ್ಶನ ನೀಡಿದೆ. ಮುಂದಿನ ಪಂದ್ಯ ಹಾಗೂ ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ” ಎಂದು ಟೋಕಿಯೊ ಒಲಿಂಪಿಕ್ಸ್ನ ಪುರುಷರ ಹಾಕಿ  ಸೆಮಿಫೈನಲ್ ನಲ್ಲಿ  ಸೋಲಿನ ಬಳಿಕ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.

Join Whatsapp