ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ಆಂಧ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿಗೆ ಚಪ್ಪಲಿ ಎಸೆತ!
Prasthutha: February 24, 2021

ಹೈದರಾಬಾದ್ : ಆಂಧ್ರ ಪ್ರದೇಶದ ತೆಲುಗು ಸುದ್ದಿ ವಾಹಿನಿಯೊಂದರ ನೇರ ಪ್ರಸಾರದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವಿಷ್ಣುವರ್ಧನ್ ರೆಡ್ಡಿಗೆ, ಚರ್ಚೆಯಲ್ಲಿ ಪಾಲ್ಗೊಂಡಿದ್ದವರೊಬ್ಬರು ಚಪ್ಪಲಿ ಎಸೆದ ಘಟನೆ ನಡೆದಿದೆ.
ಅಮರಾವತಿ ಪರಿರಕ್ಷಣಾ ಸಮಿತಿ ಜಂಟಿ ಕ್ರಿಯಾ ಸಮಿತಿ ಸದಸ್ಯ ಕೆ. ಶ್ರೀನಿವಾಸ್ ರಾವ್ ಹಾಗೂ ರೆಡ್ಡಿ ಈ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚರ್ಚೆಯ ನಡುವೆ ಶ್ರೀನಿವಾಸ್ ರಾವ್ ಅವರಿಗೆ ಟಿಡಿಪಿ ನಂಟಿದೆ ಎಂದು ರೆಡ್ಡಿ ಆಪಾದಿಸಿದ್ದರು. ಈ ವಿಷಯ ಜಗಳಕ್ಕೆ ಕಾರಣವಾಯಿತು. ರಾವ್ ಅವರನ್ನು ಹಂಗಿಸುವುದು ರೆಡ್ಡಿ ಮುಂದುವರಿಸಿದಾಗ, ಸಿಟ್ಟುಗೊಂಡ ರಾವ್, ರೆಡ್ಡಿ ಮೇಲೆ ಚಪ್ಪಲಿ ತೆಗೆದು ಥಳಿಸಲು ಮುಂದಾಗಿ, ಕೊನೆಗೆ ಎಸೆದರು.
ಈ ಹಂತದಲ್ಲಿ ಅನಿವಾರ್ಯವಾಗಿ ಟಿವಿ ವಾಹಿನಿ ಬ್ರೇಕ್ ತೆಗೆದುಕೊಳ್ಳಬೇಕಾಯಿತು. ಈ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿಗರ ಉದ್ಧಟತನದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
