ಗುಜರಾತ್’ನಲ್ಲಿ ಆರು ಮದ್ರಸಗಳನ್ನು ಧ್ವಂಸಗೊಳಿಸಿದ ಸರ್ಕಾರ

Prasthutha|

ಕಛ್: ಗುಜರಾತ್ ಸರ್ಕಾರ ಸೋಮವಾರ ರಾಜ್ಯದ ಹಲವೆಡೆ ಕಟ್ಟಡ ತೆರವು ಕಾರ್ಯಾಚರಣೆ ನಡೆಸಿದ್ದು, ಕಛ್ ಪ್ರದೇಶದಲ್ಲಿ 36 ವಾಣಿಜ್ಯ ಕಟ್ಟಡಗಳು ಮತ್ತು 6 ಮದ್ರಸಗಳನ್ನು ಕೂಡ ಧ್ವಂಸಗೊಳಿಸಲಾಗಿದೆ.

- Advertisement -

ಮಾಧ್ಯಮ ವರದಿಗಳ ಪ್ರಕಾರ, ಗಡಿ ಕರಾವಳಿ ಪ್ರದೇಶದ ಕ್ರಿಯಾ ಯೋಜನೆಯಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ನವೆಂಬರ್’ನಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸೂರತ್’ನಲ್ಲಿ ಬಿಜೆಪಿ ಕಾರ್ಯಕರ್ತರು ಜೆಸಿಬಿ (ಬುಲ್ಡೋಜರ್) ಬಳಸಿ ಪ್ರಚಾರ ನಡೆಸಿದ್ದರು.  

- Advertisement -

ವಿಶೇಷವೆಂದರೆ, ರಾಜ್ಯದಲ್ಲಿ ಅಪರಾಧ ಕೃತ್ಯಗಳ ಆರೋಪಿಗಳ ಮನೆಗಳನ್ನು ಸಂವಿಧಾನ ಬಾಹಿರವಾಗಿ ಧ್ವಂಸಗೊಳಿಸಿದ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬುಲ್ಡೋಜರ್ ಬಾಬಾ ಎಂದೂ ಅವರ ಪಕ್ಷದ ಕಾರ್ಯಕರ್ತರು ಕರೆದಿದ್ದರು.  ಆದರೆ ಉತ್ತರ ಪ್ರದೇಶ ಸರ್ಕಾರದ ಬುಲ್ಡೋಜರ್ ಕಾರ್ಯಾಚರಣೆಯನ್ನು ನ್ಯಾಯಾಲಯ ಕಟುವಾಗಿ ಟೀಕಿಸಿತ್ತು.

ಗುಜರಾತ್ ನಲ್ಲೂ ಅಪರಾಧಿಗಳು ಮತ್ತು ಅಕ್ರಮ ಅತಿಕ್ರಮಣಕಾರರ ವಿರುದ್ಧ ಬುಲ್ಡೋಜರ್’ಗಳನ್ನು ಬಳಸುವುದಾಗಿ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿ ಹೆಮ್ಮೆಯಿಂದ ಹೇಳಿಕೊಂಡಿತ್ತು.

Join Whatsapp