ಬೈಕ್’ಗೆ ಕ್ಯಾಂಟರ್​​ ಡಿಕ್ಕಿ: ಇಬ್ಬರು ಯುವಕರು ದಾರುಣ ಸಾವು

Prasthutha|

ಬೆಂಗಳೂರು: ಬೈಕ್’ಗೆ ಕ್ಯಾಂಟರ್​​ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿರುವ ದಾರುಣ ಘಟನೆ ಬ್ಯಾಡರಹಳ್ಳಿಯ ಅಂಜನಾನಗರ ಬಸ್​​ ನಿಲ್ದಾಣದ ಬಳಿ ಕಳೆದ ರಾತ್ರಿ ನಡೆದಿದೆ.

- Advertisement -

ರವಿ(22) ಹಾಗೂ ವಿಕಾಸ್(20) ಮೃತಪಟ್ಟ ಯುವಕರು ಎಂದು ಗುರುತಿಸಲಾಗಿದೆ. ರಾತ್ರಿ 8 ಗಂಟೆಗೆ ಅಂಜನಾನಗರ ಬಸ್ ನಿಲ್ದಾಣ ಬಳಿ ಪಲ್ಸರ್ ಬೈಕ್​’ನಲ್ಲಿ ಹೋಗುತ್ತಿದ್ದ ಈ ಇಬ್ಬರು ಯುವಕರಿಗೆ  ಹಿಂದಿನಿಂದ ಕ್ಯಾಂಟರ್’ ಗುದ್ದಿದೆ.

ಡಿಕ್ಕಿಯ ರಭಸಕ್ಕೆ ಯುವಕರು ಕೆಳಗೆ ಬಿದ್ದಿದ್ದು, ಅವರ ಮೇಲೆ ಕ್ಯಾಂಟರ್​ ಚಕ್ರ ಹರಿದು ಗಂಭೀರವಾಗಿ ಗಾಯಗೊಂಡಿದ್ದಾರೆ.

- Advertisement -

ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೇ ಯುವಕರು ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದ್ದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp