ಪ್ರಧಾನಿ ಮೋದಿ ಸ್ಥಿಮಿತ ಕಳೆದುಕೊಂಡಿದ್ದಾರೆ: ಇಲ್ಯಾಸ್ ತುಂಬೆ

Prasthutha|

ಬೆಂಗಳೂರು: 2024 ರ ಲೋಕಸಭಾ ಚುನಾವಣೆಯ ಆರಂಭಿಕ ಹಂತಗಳ ನಂತರ ನರೇಂದ್ರ ಮೋದಿಯವರು ಸ್ಥಿಮಿತ ಕಳೆದುಕೊಂಡಂತೆ ತೋರುತ್ತಿದೆ. ಚುನಾವಣಾ ಪ್ರಚಾರಗಳಲ್ಲಿ ಅವರ ಭಾಷಣಗಳು, ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನ ಮಂತ್ರಿಗೆ ಯೋಗ್ಯವಲ್ಲದ ಮಟ್ಟದ ಮಾತುಗಳಾಗಿವೆ ಎಂದು ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಲ್ಯಾಸ್ ತುಂಬೆ ಹೇಳಿದ್ದಾರೆ.

- Advertisement -


ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಮಂಗಳಸೂತ್ರ ಕಸಿಯುವುದು, ಹಿಂದೂ ಆಸ್ತಿಗಳನ್ನು ವಶಪಡಿಸಿಕೊಂಡು ಮುಸ್ಲಿಮರಿಗೆ ಹಂಚುವುದು, ಕ್ರಿಕೆಟ್ ತಂಡಕ್ಕೆ ಮುಸ್ಲಿಮರನ್ನು ಮಾತ್ರ ಆಯ್ಕೆ ಮಾಡುವುದು ಇತ್ಯಾದಿಯಾಗಿ ಕೋಮು ಭಾವನೆಗಳನ್ನು ಕೆರಳಿಸುವ ವಿಲಕ್ಷಣ ಹೇಳಿಕೆಗಳ ನಂತರ, ಈಗ ಕಾಂಗ್ರೆಸ್ ಪಕ್ಷ ಅದಾನಿ, ಅಂಬಾನಿಯಿಂದ ಕಪ್ಪು ಹಣ ಪಡೆದಿದೆ ಎಂಬ ಆರೋಪಗಳು. ಅಂಬಾನಿ, ಅದಾನಿ ಸ್ವತಃ ಮೋದಿ ಪೋಷಿತ ಬಂಡವಾಳಶಾಹಿಗಳು. 2014 ರಿಂದ ಇಲ್ಲಿಯವರೆಗೆ ದೇಶದಲ್ಲಿ ಮೋದಿ ಸರ್ಕಾರದ ಅಡಿಯಲ್ಲಿ ಪ್ರಗತಿ ಕಂಡವರು ಯಾರಾದರೂ ಇದ್ದರೆ ಅದು ಅದಾನಿ ಮತ್ತು ಅಂಬಾನಿ. ಅವರಿಬ್ಬರೂ ಆಡಳಿತ ಪಕ್ಷ ಬಿಜೆಪಿಗೆ ಪ್ರಮುಖ ಹಣಕಾಸು ಕೊಡುಗೆದಾರರೂ ಹೌದು. ಅವರಿಂದ ಬಿಜೆಪಿಗೆ ಬಂದ ಹಣ ಕಪ್ಪು ಹಣವೇ ಅಥವಾ ಬಿಳಿ ಹಣವೇ ಎಂದು ಮೋದಿ ಅವರು ಎಂದಿಗೂ ಯೋಚಿಸಲಿಲ್ಲ. ವಿಪಕ್ಷಗಳನ್ನು ದುರ್ಬಲಗೊಳಿಸಲು ಮತ್ತು ಬಗ್ಗಿಸಲು ಜಾರಿ ನಿರ್ದೇಶನಾಲಯವನ್ನು (ED) ದುರ್ಬಳಕೆ ಮಾಡಿಕೊಂಡದ್ದೇ ಮೋದಿ ಸರ್ಕಾರದ ಪ್ರಮುಖ ಸಾಧನಗಳಲ್ಲಿ ಒಂದಾಗಿದೆ. ಮೋದಿ ಆರೋಪದ ಪ್ರಕಾರ ಅದಾನಿ ಮತ್ತು ಅಂಬಾನಿಯ ಕಪ್ಪು ಹಣವನ್ನು ಕಾಂಗ್ರೆಸ್ಸಿಗೆ ನೀಡಿದ್ದಾರೆ ಎಂಬುದು ಖಚಿತವಾಗಿದ್ದರೆ, ಅವರ ವಿರುದ್ಧ ಇಡಿ ಮೂಲಕ ಕ್ರಮ ಕೈಗೊಳ್ಳಬೇಕಿತ್ತು. ಅದು ಬಿಟ್ಟು ಮೋದಿಯವರ ಈ ಹಠಾತ್ ವಾಗ್ದಾಳಿ ಹಾಸ್ಯಾಸ್ಪದವಾಗಿದೆ. ಮರೀಚಿಕೆಯಾಗಿರುವ 400 ಸೀಟು ಗಳಿಸುವ ಅವರ ಗುರಿಯನ್ನು ತಲುಪಲು ಪ್ರಧಾನ ಮಂತ್ರಿಗಳು ಕೋಮು ದ್ವೇಷವನ್ನು ಹುಟ್ಟುಹಾಕುವ ಮತ್ತು ಅಸಂಬದ್ಧ ಮಾತುಗಳ ಮೊರೆ ಹೋಗಿ ಬೀದಿ ರಾಜಕಾರಣಿಯ ಕೀಳು ಮಟ್ಟಕ್ಕೆ ಇಳಿದಿರುವುದು ಈ ದೇಶಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

Join Whatsapp