ಕೋಟಾ: ನೀಟ್ ಆಕಾಂಕ್ಷಿ ನಾಪತ್ತೆ

Prasthutha|

ಕೋಟಾ: ನೀಟ್ ಕೋಚಿಂಗ್ ಪಡೆದ ವಿದ್ಯಾರ್ಥಿಯೊಬ್ಬರು ಪರೀಕ್ಷೆಯ ಬಳಿಕ, ತಾನು ಮುಂದೆ ಓದಲು ಬಯಸುವುದಿಲ್ಲ ಎಂದು ಪೋಷಕರಿಗೆ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದಾರೆ.

- Advertisement -

ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ರಾಜಸ್ಥಾನದ ಗಂಗಾಪುರ ನಗರದ ನಿವಾಸಿ ರಾಜೇಂದ್ರ ಪ್ರಸಾದ್ ಮೀನಾ ಎಂದು ಗುರುತಿಸಲಾಗಿದ್ದು, ಅವರು ಮೂರು ವರ್ಷಗಳಿಂದ ಕೋಟಾದ ಕೋಚಿಂಗ್ ಕೇಂದ್ರವೊಂದರಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ಡಿಎಸ್ಪಿ ಯೋಗೇಶ್ ಶರ್ಮಾ ತಿಳಿಸಿದ್ದಾರೆ.

‘ನಾನು ಯಾವುದೇ ಆಘಾತಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಐದು ವರ್ಷ ಮನೆಯಿಂದ ದೂರ ಉಳಿಯುತ್ತೇನೆ’ ಎಂದೂ ವಿದ್ಯಾರ್ಥಿ ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.

Join Whatsapp