ಶಿವಸೇನಾ ಬಣಗಳ ಚುನಾವಣಾ ಚಿಹ್ನೆ ಸಂಘರ್ಷ: ಆಯೋಗ ಅನ್ಯಾಯ ಮಾಡಿದೆ ಎಂದ ಉದ್ಧವ್ ಠಾಕ್ರೆ

Prasthutha|

ಅಂಧೇರಿ (ಮುಂಬೈ): ಮುಂಬರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯಲ್ಲಿ ಶಿವಸೇನೆಯ ಬಣಗಳಾದ ಠಾಕ್ರೆ ಮತ್ತು ಶಿಂಧೆ ಬಣಗಳು ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆ ಬಳಸದಂತೆ ಚುನಾವಣಾ ಆಯೋಗದ ಆದೇಶವನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಅನ್ಯಾಯದ ನಡೆ ಎಂದು ಬಣ್ಣಿಸಿ,ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಈ ಮಧ್ಯೆ ಚುನಾವಣಾ ಆಯೋಗದ ಆದೇಶವು ಸೂಕ್ತವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತದ ಬಂಡಾಯ ಗುಂಪು ತಿಳಿಸಿದೆ.

ಇನ್ನೊಂದೆಡೆ ಉಪಚುನಾವಣೆಗೆ ಮಧ್ಯಂತರ ನಿರ್ಧಾರವನ್ನು ಅಂಗೀಕರಿಸುವ ಬದಲು ಚುನಾವಣಾ ಆಯೋಗ ಸಮಗ್ರವಾಗಿ ನಿರ್ಧಾರ ತೆಗೆಯಬೇಕಿತ್ತು ಎಂದು ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ, ಠಾಣೆಯ ಬಣದ ಮುಖಂಡ ಅಂಬಾದಾಸ್ ದಾನ್ವೆ ತಿಳಿಸಿದ್ದಾರೆ. ಚುನಾವಣಾ ಆಯೋಗದ ಆದೇಶವು ನಮಗೆ ಮಾಡಿದ ಅನ್ಯಾಯವಾಗಿದೆ ಎಂದು ಅವರು ತಿಳಿಸಿದರು.

- Advertisement -

ಮುಂಬೈನ ಉಪನಗರ ಅಂಧೇರಿ ಪೂರ್ವ ಕ್ಷೇತ್ರಕ್ಕೆ ನವೆಂಬರ್ 3ರಂದು ಉಪಚುನಾವಣೆ ನಡೆಯಲಿದ್ದು, ಪಕ್ಷ ವಿಭಜನೆಯಾಗಿ ಈ ಹಿಂದಿನ ಉದ್ಧವ್ ಸರ್ಕಾರ ಪತನವಾದ ಬಳಿಕ ಠಾಕ್ರೆ ಬಣಕ್ಕೆ ಇದು ಮೊದಲ ಚುನಾವಣಾ ಪರೀಕ್ಷೆಯಾಗಿದೆ.

Join Whatsapp