ತಮಿಳುನಾಡು | ಡಿಎಂಕೆ ಅಧ್ಯಕ್ಷರಾಗಿ ಎಂ.ಕೆ ಸ್ಟಾಲಿನ್ ಅವಿರೋಧವಾಗಿ ಮರು ಆಯ್ಕೆ

Prasthutha|

ಚೆನ್ನೈ: ಚೆನ್ನೈನಲ್ಲಿ ನಡೆದ ಡಿಎಂಕೆ ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ಎಂ.ಕೆ ಸ್ಟಾಲಿನ್ ಅವರು ಸತತ ಎರಡನೇ ಅವಧಿಗೆ ಡಿಎಂಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅವರ ಆಯ್ಕೆಯನ್ನು ಚುನಾವಣಾ ಉಸ್ತುವಾರಿ ಆರ್ಕಾಟ್ ಎನ್.ವೀರಸಾಮಿ ಘೋಷಿಸಿದ್ದಾರೆ.

- Advertisement -

ಜನರಲ್ ಕೌನ್ಸಿಲ್ ಸಭೆಯಲ್ಲಿ ಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಹಿರಿಯ ನಾಯಕರಾದ ದುರೈ ಮುರುಗನ್ ಮತ್ತು ಕೋಶಾಧಿಕಾರಿಯಾಗಿ ಟಿ.ಆರ್ ಬಾಲು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಸಂಸದೆ ಕನಿಮೊಳಿ ಕರುಣಾನಿಧಿ ಅವರನ್ನು ಪಕ್ಷದ ಐವರು ಉಪ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿ ನೂತನ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಅವರು ಆಯ್ಕೆ ಮಾಡಿದ್ದಾರೆ.

- Advertisement -

ಈ ಮಧ್ಯೆ ಹಿರಿಯ ನಾಯಕರಾದ ಐ ಪೆರಿಯಸಾಮಿ, ಕೆ. ಪೊನ್ಮುಡಿ, ಎ. ರಾಜಾ ಮತ್ತು ಅಂತಿಯೂರ್ ಸೆಲ್ಪರಾಜ್ ಅವರನ್ನು ಡಿಎಂಕೆಯ ಇತರ ನಾಲ್ವರು ಉಪ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ.

Join Whatsapp