ಬಾಯ್ಕಾಟ್ ಇಂಡಿಯ ಅಭಿಯಾನದ ವಿರುದ್ಧ ಶೇಖ್ ಹಸೀನಾ ಕಿಡಿ

Prasthutha|

ಢಾಕಾ:: ಬಾಂಗ್ಲಾದೇಶದಲ್ಲಿ ಪ್ರತಿಪಕ್ಷಗಳಿಂದ ʼಬಾಯ್ಕಾಟ್‌ ಇಂಡಿಯಾʼ ಅಭಿಯಾನ ನಡೆಯುತ್ತಿದ್ದು, ಇದರ ವಿರುದ್ಧ ಅಲ್ಲಿನ ಪ್ರಧಾನಿ ಶೇಕ್‌ ಹಸೀನಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನೀವು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುತ್ತೀರಾದರೆ ಮೊದಲು ನಿಮ್ಮ ಪತ್ನಿಯರ ಬಳಿಯಿರುವ ಭಾರತೀಯ ಸೀರೆಗಳನ್ನು ಸುಟ್ಟು ಹಾಕಿ ಎಂದು ಪ್ರತಿಪಕ್ಷಗಳಿಗೆ ಸವಾಲೆಸೆದಿದ್ದಾರೆ.

- Advertisement -

ಬಾಂಗ್ಲಾ ಪಿಎಂ ಶೇಖ್ ಹಸೀನಾ ಭಾರತದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಬಾಂಗ್ಲಾದೇಶದ ವಿರೋಧ ಪಕ್ಷದ ನಾಯಕರು ಭಾರತ ವಿರೋಧಿ ಭಾವನೆಗಳನ್ನು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ಅಭಿಯಾನ ಆರಂಭವಾದಾಗಿನಿಂದಲೂ ಸುಮ್ಮನಿದ್ದ ಶೇಖ್ ಹಸೀನಾ ಕೊನೆಗೆ ಮೌನ ಮುರಿದು ಕಿಡಿಯಾಗಿದ್ದಾರೆ.



Join Whatsapp