ಶಿವಸೇನೆಯ ನಾಯಕರನ್ನು ಕರೆತರಲು ಹೊರಟಿದ್ದ ಹೆಲಿಕಾಪ್ಟರ್ ಪತನ

Prasthutha|

ಶಿವಸೇನೆಯ ನಾಯಕರನ್ನು ಕರೆತರಲು ಹೊರಟಿದ್ದ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ಶುಕ್ರವಾರ ನಡೆದಿದೆ.

- Advertisement -


ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ವಾಲಿದ ಪರಿಣಾಮ ಇಬ್ಬರು ಪೈಲಟ್ ಗಳು ಗಾಯಗೊಂಡಿದ್ದಾರೆ.


ಘಟನೆ ಸಂಭವಿಸಿದಾಗ ಚಾಪರ್ ಶಿವಸೇನೆಯ ಶಿಂಧೆ ಬಣದ (ಯುಬಿಟಿ) ನಾಯಕಿ ಸುಷ್ಮಾ ಅಂಧಾರೆಯನ್ನು ಚುನಾವಣಾ ಪ್ರಚಾರಕ್ಕೆ ಕರೆದೊಯ್ಯಲು ಹೋಗುತ್ತಿತ್ತು.

- Advertisement -


ಬೆಳಗ್ಗೆ 9.30ರ ಸುಮಾರಿಗೆ ಹೆಲಿಕಾಪ್ಟರ್ ನ ಪೈಲಟ್ ಗಳು ಅದನ್ನು ಮಹುಹಾದ್ ನಲ್ಲಿರುವ ತಾತ್ಕಾಲಿಕ ಹೆಲಿಪ್ಯಾಡ್ ನಲ್ಲಿ ಇಳಿಸಲು ಪ್ರಯತ್ನಿಸಿದಾಗ ಈ ದುರ್ಘಟನೆ ಸಂಭವಿಸಿದೆ.

Join Whatsapp