ಮಾರ್ಚ್‌ ತಿಂಗಳಲ್ಲೊಂದರಲ್ಲಿ ₹1.78 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ

Prasthutha|

ನವದೆಹಲಿ: ಜಿಎಸ್‌ಟಿ ಮೂಲಕ ಮಾರ್ಚ್‌ ತಿಂಗಳಲ್ಲೊಂದರಲ್ಲಿ ₹1.78 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

- Advertisement -

2023-24ನೇ ಆರ್ಥಿಕ ವರ್ಷದಲ್ಲಿ ಫೆಬ್ರವರಿವರೆಗೆ ಒಟ್ಟು ₹18.40 ಲಕ್ಷ ಕೋಟಿ ವರಮಾನ ಸಂಗ್ರಹವಾಗಿತ್ತು. 2022-23ನೇ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 11.7ರಷ್ಟು ಏರಿಕೆಯಾಗಿದೆ.

ಕಳೆದ ಹನ್ನೊಂದು ತಿಂಗಳಿನಲ್ಲಿ ಸರಾಸರಿ ಸಂಗ್ರಹವು ₹1.67 ಲಕ್ಷ ಕೋಟಿ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಸರಾಸರಿ ಸಂಗ್ರಹ ₹1.5 ಲಕ್ಷ ಕೋಟಿ ಇತ್ತು ಎಂದು ಸಚಿವಾಲಯವು ವಿವರಿಸಿದೆ. ಕಳೆದ ಆರ್ಥಿಕ ವರ್ಷದ ಸಂಗ್ರಹವಾಗಿದ್ದ ವರಮಾನಕ್ಕೆ ಹೋಲಿಸಿದರೆ ಈ ವರ್ಷ ಶೇ 11.5ರಷ್ಟು ಏರಿಕೆಯಾಗಿದೆ.



Join Whatsapp