ನವದೆಹಲಿ: ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದದ 30 ಗ್ರಾಮಗಳನ್ನು ಚೀನಾ ತನ್ನದೆಂದು ಪಟ್ಟಿ ಬಿಡುಗಡೆ ಮಾಡಿದೆ.ಈ ಗ್ರಾಮಗಳ ಹೆಸರು ಬದಲಾಯಿಸಿ ಪಟ್ಟಿಯಲ್ಲಿ ಸೇರಿಸಿದೆ.
ಚೀನಾ ಸರ್ಕಾರದ ನಾಗರಿಕರ ಸಚಿವಾಲಯದ ಹಿಡಿತದಲ್ಲಿರುವ ಗ್ಲೋಬಲ್ ಟೈಮ್ಸ್ ಮೂಲಕ ಚೀನಾ ಅರುಣಾಚಲ ಪ್ರದೇಶದ 30 ಗ್ರಾಮಗಳನ್ನು ತನ್ನದೆಂದು ಹೇಳಿಕೊಂಡಿದೆ. ಅರುಣಾಚಲ ಪ್ರದೇಶವನ್ನು ಜೀನಾ ಝಂಗ್ನಮ್ ಎಂದು ಕರೆಯುತ್ತಿದೆ. ಝಂಗ್ನಮ್‌ನ 30 ಹಳ್ಳಿಗಳನ್ನು ಚೀನಾದ ಗ್ರಾಮಗಳು ಎಂದು ಪಟ್ಟಿ ಮಾಡಿದೆ. ಈ ಭಾಗ ಚೀನಾ ಹಿಡಿತದಲ್ಲಿರುವ ದಕ್ಷಿಣ ಟಿಬೆಟ್ ಭಾಗ ಎಂದು ಹೇಳಿಕೊಂಡಿದೆ.
ಇದು ಚೀನಾ ಬಿಡುಗಡೆ ಮಾಡಿರುವ ನಾಲ್ಕನೇ ಪಟ್ಟಿಯಾಗಿದೆ. ಕಳೆದ ಮೂರು ಪಟ್ಟಿಗಳಲ್ಲಿ ಭಾರತದ ಗ್ರಾಮಗಳನ್ನು ತನ್ನದೆಂದು ಹೆಸರಿಸಿ ಬಿಡುಗಡೆ ಮಾಡಿದೆ. 2017ರಲ್ಲಿ ಚೀನಾ ಇದೇ ರೀತಿ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಭಾರತದ 6 ಹಳ್ಳಿಗಳನ್ನು ತನ್ನದೆಂದು ಪಟ್ಟಿ ಮಾಡಿತ್ತು. 2021ರಲ್ಲಿ 2ನೇ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ 15 ಪ್ರದೇಶಗಳನ್ನು ಚೀನಾ ತನ್ನದು ಎಂದು ಹೇಳಿಕೊಂಡಿತ್ತು. 2023ರಲ್ಲಿ ಅರುಣಾಚಲ ಪ್ರದೇಶದ 11 ವಲಯಗಳನ್ನು ತನ್ನದೆಂದು ಹೆಸರಿಸಿ ಪಟ್ಟಿ ಬಿಡುಗಡೆ ಮಾಡಿದೆ. ಇದೀಗ ನಾಲ್ಕನೇ ಪಟ್ಟಿಯಲ್ಲಿ ಈ ಸಂಖ್ಯೆ 30ಕ್ಕೇರಿದೆ.