ಸಾವರ್ಕರ್ ಫೋಟೊ ತೆಗೆಸಿದ ಆರೋಪ: ಷರೀಫ್’ಗೆ ಆ.26 ರ ವರೆಗೆ ನ್ಯಾಯಾಂಗ ಬಂಧನ

Prasthutha|

ಶಿವಮೊಗ್ಗ: ನಗರದ ಬೇರಿಸ್ ಸೆಂಟರ್ ಮಾಲ್ ನಲ್ಲಿ ಸಾವರ್ಕರ್ ಭಾವಚಿತ್ರವನ್ನು ತೆಗಿಸಿದ ಆರೋಪದಲ್ಲಿ ಎಂಡಿ ಷರೀಫ್ ಅವರಿಗೆ ಆ. 26ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಸಾವರ್ಕರ್ ಭಾವಚಿತ್ರವನ್ನು ತೆಗೆಸಿದ ಎಂ.ಡಿ ಷರೀಫ್ ವಿರುದ್ಧ ಶನಿವಾರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಷರೀಫ್ ಅವರು ಪಾಲಿಕೆ ಆಯುಕ್ತರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂಬ ಆರೋಪದ ಅಡಿ ಬಂಧಿಸಲಾಗಿತ್ತು.

- Advertisement -


ಸಾವರ್ಕರ್ ಭಾವಚಿತ್ರ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮೇಯರ್‌ ಸುನೀತಾ, ನಗರ ಬಿಜೆಪಿ ಅಧ್ಯಕ್ಷ ಜಗದೀಶ್ ಹಾಗೂ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರ ಭೇಟಿ ನೀಡಿದ್ದರು. ಮಾಲ್​ ನ ಆಡಳಿತ ಮಂಡಳಿಗೆ ಮೇಯರ್‌ ಹಾಗೂ ಬಿಜೆಪಿ ಪ್ರಮುಖರು ಬೆಂಬಲ ಸೂಚಿಸಿದ್ದರು.

- Advertisement -