ಚರ್ಚ್‌ ನಲ್ಲಿ ಅಗ್ನಿ ಅವಘಡ: 41 ಮಂದಿ ಸಾವು

Prasthutha|

ಕೈರೋ: ಈಜಿಪ್ತ್ ರಾಜಧಾನಿ ಕೈರೋದ ಕಾಪ್ಟಿಕ್ ಕ್ರಿಶ್ಚಿಯನ್ ಚರ್ಚ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ 41 ಮಂದಿ ಸಾವನ್ನಪ್ಪಿದ್ದಾರೆ ಎಂದು ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಕೈರೋದ ಇಂಬಾಬಾ ಜಿಲ್ಲೆಯ ಅಬೂ ಸಿಫೈನ್ ಚರ್ಚ್‌ನಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಹೇಗೆ ಆವರಿಸಿಕೊಂಡಿದೆ ಎಂದು ಇನ್ನೂ ತಿಳಿದುಬಂದಿಲ್ಲ. ಈ ವೇಳೆ ಸುಮಾರು ಐದು ಸಾವಿರದಷ್ಟು ಮಂದಿ ಚರ್ಚ್‌ನಲ್ಲಿ ಪ್ರಾರ್ಥನೆಗೆ ಸೇರಿದ್ದು, 55 ಮಂದಿ ಗಾಯಗೊಂಡಿದ್ದಾರೆ.

ಅವಘಡ ಸ್ಥಳದಲ್ಲಿ “ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಾನು ಎಲ್ಲಾ ರಾಜ್ಯ ಸೇವೆಗಳನ್ನು ಸಜ್ಜುಗೊಳಿಸಿದ್ದೇನೆ” ಎಂದು ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ಘೋಷಿಸಿದ್ದಾರೆ.

ಸುಮಾರು 5 ಅಗ್ನಿಶಾಮಕ ವಾಹನಗಳು ಘಟನಾ ಸ್ಥಳದಲ್ಲಿ ಕಾರ್ಯಾಚರಿಸಿದ್ದು, ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ.

- Advertisement -