ಎಸ್‌ಡಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ: ಮುಂಬರುವ ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆ ಬಗ್ಗೆ ಸುದೀರ್ಘ ಚರ್ಚೆ

Prasthutha|

ಜೈಪುರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು 10 ಡಿಸೆಂಬರ್ 2022 ರ ಶನಿವಾರದಂದು ಜೈಪುರದಲ್ಲಿ ಆರಂಭವಾಯಿತು.

- Advertisement -

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ, ಎಸ್‌ಡಿಪಿಐ ಪಕ್ಷವು ತನ್ನ ವಿರುದ್ಧ ಮಾತನಾಡುತ್ತದೆ ಎಂದು ಬಿಜೆಪಿಯು ಎಸ್‌ಡಿಪಿಐ ಯನ್ನು ಶತ್ರು ಎಂದು ಪರಿಗಣಿಸಿದೆ. ಯಾವುದೇ ಅಪರಾಧ ಮಾಡದ ಜನರನ್ನು ಕೂಡ ಸುಳ್ಳು ಆರೋಪದಡಿ ಜೈಲಿಗೆ ಹಾಕಲಾಗುತ್ತಿದೆ. ಆದರೆ ನಮ್ಮ ಎಸ್‌ಡಿಪಿಐ ಪಕ್ಷ ಬಿಜೆಪಿ ವಿರುದ್ಧ ಮಾತನಾಡುವ ನಿಜವಾದ ಅಪರಾಧವನ್ನಾದರೂ ಮಾಡುತ್ತಿದೆ. ನಾವು ಸತ್ಯವನ್ನೇ ಹೇಳುತ್ತಿದ್ದು, ಮುಂದೆಯೂ ಹೇಳುತ್ತಲೇ ಇರುತ್ತೇವೆ ಎಂದು ಪ್ರತಿಪಾದಿಸಿದರು.

ತಮ್ಮ ಭಾಷಣದಲ್ಲಿ ಐತಿಹಾಸಿಕ ದೃಷ್ಟಿಕೋನದಿಂದ ಜಾತಿ ರಾಜಕಾರಣದ ಕುರಿತು ಮಾತನಾಡಿದ ಎಸ್‌ಡಿಪಿಐ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ಬಿ.ಎಂ. ಕಾಂಬಳೆ ಅವರು, ಭಾರತದಲ್ಲಿ ಜಾತಿ ಲೆಕ್ಕಾಚಾರದ ಆಧಾರದ ಮೇಲೆ ರಾಜಕೀಯ ಅಧಿಕಾರ ನಿಂತಿದೆ. ಅದನ್ನು ನಾವು ಸಾಮಾಜಿಕ ನಿರ್ವಹಣೆಯ ಮೂಲಕ ಅರ್ಥಮಾಡಿಕೊಳ್ಳಬಹುದು, ಇದನ್ನು ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಉನ್ನತ ಸ್ಥಾನದ ನಾಯಕರು ಜಾಣತನದಿಂದ ಅರ್ಥ ಮಾಡಿಕೊಂಡಿದ್ದಾರೆ. “ಜಾತಿ ಶ್ರೇಣಿ ಮತ್ತು ಅದನ್ನು ಹೇಗೆ ನಿರ್ವಹಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳದೆ ಭಾರತೀಯ ರಾಜಕೀಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಭಾರತೀಯ ರಾಜಕೀಯದ ಜಾತಿವಾದಿ ವಿಕಾಸದ ಕುರಿತು ವಿವರಿಸಿದರು.

- Advertisement -

ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಶಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಇಲ್ಯಾಸ್ ಮುಹಮ್ಮದ್ ತುಂಬೆ ಮತ್ತು ಅಬ್ದುಲ್ ಮಜೀದ್ ಫೈಝಿ  ಅವರು ವಿವಿಧ ಅಧಿವೇಶನಗಳಲ್ಲಿ ಮುಂದಿನ 10 ವರ್ಷಗಳ ಮುನ್ನೋಟದ ವರದಿಗಳು ಮತ್ತು ಭವಿಷ್ಯದ ಕಾರ್ಯಸೂಚಿಗಳನ್ನು ಮಂಡಿಸಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್ ಫಾರೂಕಿ, ರಾಷ್ಟ್ರೀಯ ಕಾರ್ಯದರ್ಶಿಗಳಾದ ಫೈಸಲ್ ಇಝುದ್ದೀನ್, ಅಬ್ದುಲ್ ಸತ್ತಾರ್ ಮತ್ತು ತಯೀದುಲ್ ಇಸ್ಲಾಂ ಉಪಸ್ಥಿತರಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡರು. ರಾಜ್ಯದ ಪ್ರತಿನಿಧಿಗಳು ಮತ್ತು ದೇಶದ ವಿವಿದೆಡೆಗಳಿಂದ ಬಂದಿದ್ದ ವಿಶೇಷ ಆಹ್ವಾನಿತರು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದು, ಒಟ್ಟು ನಾಲ್ಕು ಅಧಿವೇಶನಗಳು ನಡೆದವು.

Join Whatsapp